‘ಅಗ್ನಿಸಾಕ್ಷಿ’ ಬಿಟ್ಟು ಸಿದ್ಧಾರ್ಥ ಹೋಗಿದ್ದೆಲ್ಲಿಗೆ ಗೊತ್ತಾ?

 ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಗ್ನಿಸಾಕ್ಷಿ’ ಧಾರವಾಹಿಯ ನಾಯಕ ನಟ ವಿಜಯ್ ಸೂರ್ಯ ಎಂದರೆ ಅದೆಷ್ಟೋ ಹೆಣ್ಣು ಮಕ್ಕಳಿಗೆ ಇಷ್ಟ. ಆದರೆ ಕೆಲವು ದಿನಗಳಿಂದ ಧಾರವಾಹಿಯಿಂದ ನಾಪತ್ತೆಯಾಗಿರುವ ಸಿದ್ಧಾರ್ಥನ ಪಾತ್ರಧಾರಿ ವಿಜಯ್ ಎಲ್ಲಿ ಹೋಗಿದ್ದಾರೆ ಗೊತ್ತಾ?ಕದ್ದು ಮುಚ್ಚಿ ಎನ್ನುವ ಸಿನಿಮಾದ ಶೂಟಿಂಗ್ ಗಾಗಿ ಧಾರವಾಹಿಯಿಂದ ಕೆಲವು ದಿನಗಳ ಮಟ್ಟಿಗೆ ಬ್ರೇಕ್ ತೆಗೆದುಕೊಂಡಿರುವ ವಿಜಯ್ ಸೂರ್ಯ ಕಡೆಯಿಂದ ಮತ್ತೊಂದು ಸುದ್ದಿ ಬಂದಿದೆ.


 ಕಲರ್ಸ್ ವಾಹಿನಿಯಲ್ಲಿ ಮಜಾ ಟಾಕೀಸ್ ಬದಲಿಗೆ ಇನ್ನು ಮುಂದಿನ ವೀಕೆಂಡ್ ಗಳಲ್ಲಿ ಪ್ರಸಾರವಾಗಲಿರುವ ಕಾಮಿಡಿ ಟಾಕೀಸ್ ಗೆ ವಿಜಯ್ ಸೂರ್ಯ ನಿರೂಪಕರಾಗಲಿದ್ದಾರಂತೆ! ಇದುವರೆಗೆ ನಟನ ಅವತಾರದಲ್ಲಿ ನೀವು ನೋಡಿದ್ದ ಗುಳಿ ಕೆನ್ನೆಯ ಹೀರೋನನ್ನು ಇನ್ನು ಹೊಸ ಅವತಾರದಲ್ಲಿ ಪ್ರತೀ ಶನಿವಾರ ಮತ್ತು ಭಾನುವಾರ ನೋಡಬಹುದು.

ವಿಶೇಷವೆಂದರೆ, ಈ ಕಾಮಿಡಿ ಶೋಗೆ ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ಮತ್ತು ನಟಿ ರಚಿತಾ ರಾಂ ತೀರ್ಪುಗಾರರಾಗಲಿದ್ದಾರೆ. ಈಗಾಗಲೇ ಕಾಮಿಡಿ ಶೋ ಶೂಟಿಂಗ್ ಕೂಡಾ ಆರಂಭವಾಗಿದೆಯಂತೆ. ಸದ್ಯದಲ್ಲೇ ವಿಜಯ್ ಹೊಸ ಅವತಾರವನ್ನು ನೀವು ನೋಡಬಹುದು!
‘ಅಗ್ನಿಸಾಕ್ಷಿ’ ಬಿಟ್ಟು ಸಿದ್ಧಾರ್ಥ ಹೋಗಿದ್ದೆಲ್ಲಿಗೆ ಗೊತ್ತಾ? ‘ಅಗ್ನಿಸಾಕ್ಷಿ’ ಬಿಟ್ಟು ಸಿದ್ಧಾರ್ಥ ಹೋಗಿದ್ದೆಲ್ಲಿಗೆ ಗೊತ್ತಾ? Reviewed by VIVEKARAMA on ಅಕ್ಟೋಬರ್ 23, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.