'ಮಜಾ ಟಾಕೀಸ್' ಹಾಸ್ಯ ಪಯಣ ಮುಗಿಸಿದ ಸೃಜನ್ ಲೋಕೇಶ್'

ಮಜಾ ವಿತ್ ಸುಜಾ ಯಶಸ್ಸಿನ ನಂತರ ಮಜಾ ಟಾಕೀಸ್ ಪಯಣ ಶುರುಮಾಡಿದ್ದ ಸೃಜನ್ ಲೋಕೇಶ್ ಇದೀಗ ನಗುವಿನ ತೆರೆ ಎಳೆದಿದ್ದಾರೆ.

2015ರ ಫೆಬ್ರವರಿ 7 ರಂದು ಶುರುವಾಗಿದ್ದ ಮಜಾ ಟಾಕೀಸ್ ಸತತ ಎರಡುವರೆ ವರ್ಷ ಕಿರುತೆರೆಯ ವೀಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಕಲರ್ಸ್ ಕನ್ನಡ ವಾಹಿನಿಯ ಯಶಸ್ವಿ ಕಾರ್ಯಕ್ರಮವಾಗಿದ್ದ ಮಜಾ ಟಾಕೀಸ್ ಈಗ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ತಲುಪಿದೆ.


ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರೆಲ್ಲಾ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಜಾ ಟಾಕೀಸ್ ಸಿನಿಮಾ ತಂಡದ ಪ್ರಮೋಷನ್ ಗಳಿಗೆ ಒಂದು ಒಳ್ಳೆಯ ವೇದಿಕೆಯೂ ಆಗಿತ್ತು.

ಕಳೆದ ಶನಿವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಜಾ ಟಾಕೀಸ್ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಸಂಚಿಕೆಯ ಚಿತ್ರೀಕರಣ ಅದ್ಧೂರಿಯಾಗಿ ನಡೆದಿದ್ದು ಆ ಸಂಚಿಕೆ ದೀಪಾವಳಿ ಹಬ್ಬದ ವಿಶೇಷವಾಗಿ ಪ್ರಸಾರವಾಗುವ ಸಾಧ್ಯತೆ ಇದೆ. 

'ಮಜಾ ಟಾಕೀಸ್' ಹಾಸ್ಯ ಪಯಣ ಮುಗಿಸಿದ ಸೃಜನ್ ಲೋಕೇಶ್' 'ಮಜಾ ಟಾಕೀಸ್' ಹಾಸ್ಯ ಪಯಣ ಮುಗಿಸಿದ ಸೃಜನ್ ಲೋಕೇಶ್' Reviewed by VIVEKARAMA on ಅಕ್ಟೋಬರ್ 10, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.