'ಸೂಪರ್ ಟಾಕ್ ಟೈಂ' ಕಾರ್ಯಕ್ರಮ ಈಗ 'ಗೋಲ್ಡನ್ ಟಾಕ್ ಟೈಂ' ಆಯ್ತು

'ಕಲರ್ಸ್ ಕನ್ನಡ' ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳ ಪೈಕಿ 'ಸೂಪರ್ ಟಾಕ್ ಟೈಂ' ಕೂಡ ಒಂದು. ಅಕುಲ್ ಬಾಲಾಜಿ ನಿರೂಪಣೆ ಮಾಡುವ ಈ ಕಾರ್ಯಕ್ರಮಕ್ಕೆ ಈಗ ನಿಜಕ್ಕೂ ಒಂದು ಕಳೆ ಬಂದಿದೆ. ಅದಕ್ಕೆ ಕಾರಣ ಆಗಿರುವುದು ಗೋಲ್ಡನ್ ಸ್ಟಾರ್ ಗಣೇಶ್.

ಗಣೇಶ್ ಮತ್ತು ಅವರ ಪತ್ನಿ ಶಿಲ್ಪಾ ಗಣೇಶ್ ಈಗ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮದ ಅತಿಥಿಗಳಾಗಿದ್ದಾರೆ.


ಇದರೊಂದಿಗೆ ಗಣೇಶ್ ತಮ್ಮ ಪತ್ನಿ ಶಿಲ್ಪಾ ಗಣೇಶ್ ರೊಂದಿಗೆ ಈ ಕಾರ್ಯಕ್ರಮಕ್ಕೆ ಬಂದಿರುವುದು ಮತ್ತೊಂದು ವಿಶೇಷ. ಶಿಲ್ಪಾ ಗಣೇಶ್ ಹೆಚ್ಚಾಗಿ ಯಾವುದೇ ಟಿವಿ ಕಾರ್ಯಕ್ರಮಕ್ಕೂ ಬರುವುದಿಲ್ಲ. ಜೊತೆಗೆ ಗಣೇಶ್ ಅವರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೂ ಶಿಲ್ಪಾ ಮಿಸ್ ಆಗಿದ್ದರು. ಸೋ... ಈ ಎಲ್ಲ ಕಾರಣಗಳಿಂದ ಗಣೇಶ್ ಅತಿಥಿ ಆಗಿರುವ ಈ ಕಾರ್ಯಕ್ರಮ ಈಗ 'ಗೋಲ್ಡನ್ ಟಾಕ್ ಟೈಂ' ಆಗಿದೆ.'ಸೂಪರ್ ಟಾಕ್ ಟೈಂ' ಕಾರ್ಯಕ್ರಮ ಈಗ 'ಗೋಲ್ಡನ್ ಟಾಕ್ ಟೈಂ' ಆಯ್ತು 'ಸೂಪರ್ ಟಾಕ್ ಟೈಂ' ಕಾರ್ಯಕ್ರಮ ಈಗ 'ಗೋಲ್ಡನ್ ಟಾಕ್ ಟೈಂ' ಆಯ್ತು Reviewed by VIVEKARAMA on ಅಕ್ಟೋಬರ್ 09, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.