'ದಿ ವಿಲನ್' ಚಿತ್ರದಲ್ಲಿ ಶಿವಣ್ಣ ಭರ್ಜರಿ ಸ್ಟಂಟ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎನರ್ಜಿಗೆ ಈ ಭರ್ಜರಿ ಸ್ಟಂಟ್ ಸಾಕ್ಷಿ ಎನ್ನುವಂತಿದೆ ಈ ಫೋಟೋ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಭಾರಿ ಬಜೆಟ್ ಚಿತ್ರ 'ದಿ ವಿಲನ್'. ಈ ಚಿತ್ರವನ್ನು ಸಿ ಆರ್ ಮನೋಹರ್ ನಿರ್ಮಿಸುತ್ತಿದ್ದು ಪ್ರೇಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.


'ದಿ ವಿಲನ್' ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಶಿವರಾಜ್ ಕುಮಾರ್ ಪಾತ್ರವನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಕಾರಿನ ಮೇಲೆ ಜಂಪ್ ಹೊಡೆಯುವ ದೃಶ್ಯವನ್ನು ಡ್ಯೂಪ್ ಇಲ್ಲದಂತೆ ಚಿತ್ರೀಕರಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ದಿನದಿಂದ ದಿನಕ್ಕೆ 'ದಿ ವಿಲನ್' ಗಮನಸೆಳೆಯುತ್ತಿದೆ.


ಈ ಹಿಂದೆಯೇ ಈ ಚಿತ್ರದ ಕಥೆ ಲೀಕ್ ಆದ ಸುದ್ದಿಯೂ ಬಂದಿತ್ತು. 'ದಿ ವಿಲನ್‌' ಚಿತ್ರದ ಕತೆ ಡಾ. ರಾಜ್‌ ನಟಿಸಿದ್ದ ದಾರಿ ತಪ್ಪಿದ ಮಗ ಚಿತ್ರದ ಕತೆಯೇ ಆಗಿದೆ ಎನ್ನುವ ಮಾಹಿತಿ ಸಿಕ್ಕಿದ್ದು, ಪ್ರೇಮ್‌ ಆ ಚಿತ್ರದಿಂದ ಪ್ರೇರಣೆಗೊಂಡು ಈ ಚಿತ್ರ ಮಾಡುತ್ತಿದ್ದಾರಾ? ಅಥವಾ ಇಡೀ ಕತೆಯನ್ನೇ ಎತ್ತಿಕೊಂಡಿದ್ದಾರಾ? ಎಂಬುದು ಗ್ತೊತಾಗಿಲ್ಲ.ಶಿವರಾಜ್‌ಕುಮಾರ್‌ ಲಂಡನ್‌ನಲ್ಲಿ ಇದ್ದರೆ, ಸುದೀಪ್‌ ಕರ್ನಾಟಕದಲ್ಲಿ ಇರುತ್ತಾರೆ. ಇವರಿಬ್ಬರೂ ಹೇಗೆ ಮೀಟ್‌ ಮಾಡುತ್ತಾರೆ? ಎಂಬುದೇ ಚಿತ್ರಕತೆಯಾಗಿರುತ್ತದಂತೆ. ಉತ್ತರ ಕರ್ನಾಟಕದಲ್ಲಿ ಈಗಾಗಲೇ ಸುದೀಪ್‌ ಭಾಗದ ಚಿತ್ರೀಕರಣ ಆರಂಭಗೊಂಡಿದೆ. ಪ್ರೇಮ್‌ ತಮ್ಮ ಇಡೀ ತಂಡದೊಂದಿಗೆ ಅಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಸುದೀಪ್‌, ಬಾಲಿವುಡ್‌ ನಟ ಮಿಥುನ್‌ ಚಕ್ರವರ್ತಿ ಸೇರಿ ಅನೇಕರು ಪಾಲ್ಗೊಂಡಿದ್ದಾರೆ
'ದಿ ವಿಲನ್' ಚಿತ್ರದಲ್ಲಿ ಶಿವಣ್ಣ ಭರ್ಜರಿ ಸ್ಟಂಟ್ 'ದಿ ವಿಲನ್' ಚಿತ್ರದಲ್ಲಿ ಶಿವಣ್ಣ ಭರ್ಜರಿ ಸ್ಟಂಟ್ Reviewed by VIVEKARAMA on ಅಕ್ಟೋಬರ್ 28, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.