'ಕುರುಕ್ಷೇತ್ರ'ಕ್ಕೆ ಹಿಂದಿಯಲ್ಲಿ ಇಷ್ಟೊಂದು ಬೆಲೆನಾ? ಇತಿಹಾಸ ನಿರ್ಮಿಸಿದ ಕನ್ನಡ ಚಿತ್ರ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ 'ಕುರುಕ್ಷೇತ್ರ' ಸಿನಿಮಾದ ಮೇಲೆ ಇಡೀ ದಕ್ಷಿಣ ಭಾರತದ ಕಣ್ಣು ಬಿದ್ದಿದೆ ಎನ್ನುವುದು ವಾಸ್ತವ. ಅದಕ್ಕೆ ತೆಲುಗು, ತಮಿಳು ಡಬ್ಬಿಂಗ್ ಹಕ್ಕುಗಳಿಗಾಗಿ ಭಾರಿ ಪೈಪೋಟಿ ನಡೆಯುತ್ತಿದೆ.

ಅಚ್ಚರಿ ವಿಷ್ಯವಂದ್ರೆ ನಿರೀಕ್ಷೆ ಮೀರಿದ ವ್ಯವಹಾರ ಬಾಲಿವುಡ್ ನಿಂದ ಆಗಿದೆ. ಹೌದು, ಶೂಟಿಂಗ್ ಹಂತದಲ್ಲೇ ಹಿಂದಿಯ ಡಬ್ಬಿಂಗ್ ರೈಟ್ಸ್ ಸೇಲ್ ಆಗಿದ್ದು, ಇದೇ ಮೊದಲ ಬಾರಿಗೆ ಕನ್ನಡ ಚಿತ್ರಕ್ಕೆ ಇಷ್ಟೊಂದು ಬೆಲೆ ಸಿಕ್ಕಿದೆ ಎನ್ನಲಾಗಿದೆ.


ಬರೋಬ್ಬರಿ 9 ಕೋಟಿಗೆ ಸೇಲ್ 
ಮೂಲಗಳ ಪ್ರಕಾರ ದರ್ಶನ್ ಅವರ 50ನೇ ಸಿನಿಮಾ 'ಕುರುಕ್ಷೇತ್ರ'ದ ಹಿಂದಿ ಡಬ್ಬಿಂಗ್ ರೈಟ್ಸ್ ಸುಮಾರು 9 ಕೋಟಿಗೆ ಮಾರಾಟವಾಗಿದೆಯಂತೆ.

ಆರಂಭದಲ್ಲಿ 4 ಕೋಟಿಗೆ ಕೋಟ್ ಮಾಡಲಾಗಿತ್ತಂತೆ. ಆದ್ರೆ, ಬಿಡ್ಡಿಂಗ್ ನಲ್ಲಿ ಬೇಡಿಕೆ ಹೆಚ್ಚಿದ್ದರಿಂದ ಅಂತಿಮವಾಗಿ 9 ಕೋಟಿಗೆ ದರ್ಶನ್ ಸಿನಿಮಾ ಸೇಲ್ ಆಗಿದೆ ಎನ್ನಲಾಗುತ್ತಿದೆ.


ಇದುವರೆಗೂ ಹಿಂದಿ ಡಬ್ಬಿಂಗ್ ರೈಟ್ಸ್ ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗಿರುವ ಕನ್ನಡ ಸಿನಿಮಾ 'ಕುರುಕ್ಷೇತ್ರ' ಎಂಬ ಹೊಸ ದಾಖಲೆ ಮಾಡಿದೆ.

ಕಳೆದ ಒಂದೂವರೆ ತಿಂಗಳಿನಿಂದ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕುರುಕ್ಷೇತ್ರ ಚಿತ್ರೀಕರಣ ನಡೆಯುತ್ತಿದೆ. ದರ್ಶನ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ಶಶಿಕುಮಾರ್, ಸೋನು ಸೂದ್, ಯಶಸ್ ಸೂರ್ಯ ಡ್ಯಾನಿಶ್ ಅಖ್ತರ್ ಸೇರಿದಂತೆ ಬಹುದೊಡ್ಡ ತಾರಬಳಗ ಚಿತ್ರದಲ್ಲಿ ಅಭಿನಯಿಸುತ್ತಿದ್ದೆ. ನಾಗಣ್ಣ ನಿರ್ದೇಶನ ಮಾಡುತ್ತಿದ್ದು, ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ.
'ಕುರುಕ್ಷೇತ್ರ'ಕ್ಕೆ ಹಿಂದಿಯಲ್ಲಿ ಇಷ್ಟೊಂದು ಬೆಲೆನಾ? ಇತಿಹಾಸ ನಿರ್ಮಿಸಿದ ಕನ್ನಡ ಚಿತ್ರ.! 'ಕುರುಕ್ಷೇತ್ರ'ಕ್ಕೆ ಹಿಂದಿಯಲ್ಲಿ ಇಷ್ಟೊಂದು ಬೆಲೆನಾ? ಇತಿಹಾಸ ನಿರ್ಮಿಸಿದ ಕನ್ನಡ ಚಿತ್ರ.! Reviewed by VIVEKARAMA on ಅಕ್ಟೋಬರ್ 16, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.