ಟಾಲಿವುಡ್ ನಟ ಬಾಲಕೃಷ್ಣ ಜೊತೆ ನಟಿಸಲಿದ್ದಾರೆ 'ನೀರ್ ದೋಸೆ' ಹರಿಪ್ರಿಯಾ

ನಟಿ ಹರಿಪ್ರಿಯಾ ಕೈನಲ್ಲಿ ಈಗ ಕನ್ನಡದ ಸಾಕಷ್ಟು ಸಿನಿಮಾಗಳಿವೆ. ದರ್ಶನ್ ಅವರ 'ಕುರುಕ್ಷೇತ್ರ' ಸೇರಿದಂತೆ ಅನೇಕ ದೊಡ್ಡ ಸಿನಿಮಾಗಳಲ್ಲಿ ಹರಿಪ್ರಿಯಾ ಈಗ ಅಭಿನಯಿಸುತ್ತಿದ್ದಾರೆ. ಅದರ ಜೊತೆಗೆ ಇದೀಗ ಟಾಲಿವುಡ್ ನಿಂದ ಒಂದು ದೊಡ್ಡ ಆಫರ್ ಹರಿಪ್ರಿಯಾಗೆ ಬಂದಿದೆ.


ನಟ ಬಾಲಕೃಷ್ಣ ಅವರಿಗೆ ಹೀರೋಯಿನ್ ಆಗುವ ಮೂಲಕ ಹರಿಪ್ರಿಯಾ ಮತ್ತೆ ಟಾಲಿವುಡ್ ಕಡೆ ಮುಖ ಮಾಡಿದ್ದಾರೆ. ಬಾಲಕೃಷ್ಣ ಅವರ 102ನೇ ಸಿನಿಮಾಗೆ ಹರಿಪ್ರಿಯಾ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ನಯನ ತಾರ ಹಾಗೂ ಹರಿಪ್ರಿಯಾ ಇಬ್ಬರೂ ಬಾಲಯ್ಯ ಜೊತೆ ಡ್ಯುಯೆಟ್ ಹಾಡಲಿದ್ದಾರೆ.


ಈ ಹಿಂದೆ ಕೆಲ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದ ಹರಿಪ್ರಿಯಾ ಮೂರು ವರ್ಷದ ನಂತರ ಮತ್ತೆ ಟಾಲಿವುಡ್ ಗೆ ಕಾಲಿಟ್ಟಿದ್ದಾರೆ. ಹೈದರಾಬಾದ್ ನಲ್ಲಿ ಚಿತ್ರದ ಶೂಟಿಂಗ್ ಸೋಮವಾರದಿಂದ ಶುರುವಾಗಲಿದೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಸ್ಟಾರ್ ನಿರ್ದೇಶಕ ಕೆ.ಎಸ್.ರವಿಕುಮಾರ್ ನಿರ್ದೇಶನ ಮಾಡಲಿದ್ದಾರೆ.
ಟಾಲಿವುಡ್ ನಟ ಬಾಲಕೃಷ್ಣ ಜೊತೆ ನಟಿಸಲಿದ್ದಾರೆ 'ನೀರ್ ದೋಸೆ' ಹರಿಪ್ರಿಯಾ ಟಾಲಿವುಡ್ ನಟ ಬಾಲಕೃಷ್ಣ ಜೊತೆ ನಟಿಸಲಿದ್ದಾರೆ 'ನೀರ್ ದೋಸೆ' ಹರಿಪ್ರಿಯಾ Reviewed by VIVEKARAMA on ಅಕ್ಟೋಬರ್ 21, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.