ಏನ್‌ 'ಬುಲ್‌ ಬುಲ್‌' ಟಾಲಿವುಡ್‌ಗೆ ಹೊರಟ್ಯಾ?

ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಟಾಲಿವುಡ್‌ನತ್ತ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾತು ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿದೆ.


ಇತ್ತೀಚೆಗಷ್ಟೇ ಹೊಸಲು‌ಕ್‌ನಲ್ಲಿ 'ಬುಲ್‌ ಬುಲ್‌' ಬೆಡಗಿಯ ಫೋಟೋಶೂಟ್‌ ಮಾಡಲಾಗಿದೆ. ಈ ಮೂಲಕ ತೆಲಗು ಚಿತ್ರರಂಗಕ್ಕೆ ಎಂಟ್ರಿ ನೀಡಲು ಸಿದ್ಧತೆ ನಡೆಸಿದ್ದಾರಂತೆ ರಚಿತಾ. ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಚಿತಾ ಸಖತ್ತಾಗಿ ಹೆಜ್ಜೆ ಹಾಕಿದ್ದೇ, ಟಾಲಿವುಡ್‌ ಚಿತ್ರರಂಗದಿಂದ ಆಫರ್‌ಗಳ ಸುರಿಮಳೆಯಾಗಲು ಕಾರಣವಾಯಿತಂತೆ.


ರಚಿತಾ ಸಹ ತೆಲುಗು ಚಿತ್ರಗಳಲ್ಲಿ ನಟಿಸಲು ಆಸಕ್ತಿ ತೋರಿದ್ದು, ಅಲ್ಲಿನ ನಿರ್ಮಾಣ ಸಂಸ್ಥೆಗಳ ಜತೆ ಮಾತುಕತೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ರಚಿತಾ ಯಾವ ಸ್ಟಾರ್‌ ನಟನ ಜತೆ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ವಿಷಯ ಗೊತ್ತಾಗಲಿದೆ. ಇದನ್ನು ಖುದ್ದು ರಚಿತಾ ಅವರೇ ಅಧಿಕೃತವಾಗಿ ತಿಳಿಸಲಿದ್ದಾರೆ.
ಏನ್‌ 'ಬುಲ್‌ ಬುಲ್‌' ಟಾಲಿವುಡ್‌ಗೆ ಹೊರಟ್ಯಾ? ಏನ್‌ 'ಬುಲ್‌ ಬುಲ್‌' ಟಾಲಿವುಡ್‌ಗೆ ಹೊರಟ್ಯಾ? Reviewed by VIVEKARAMA on ಅಕ್ಟೋಬರ್ 09, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.