ಆರನೇ ಸೆನ್ಸ್‌ ಬಗ್ಗೆ ಹೇಳುವ ಮೋಜೊ

ಮಾಯೆ ಮತ್ತು ವಾಸ್ತವಗಳ ನಡುವಿನ ರೋಚಕ ಕಥಾಹಂದರದ 'ಮೋಜೊ' ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದ್ದುಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.ಬಿಡುಗಡೆಗೂ ಮೊದಲೇ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಈ ಚಿತ್ರದಲ್ಲಿ ಅನೇಕ ಹೊಸ ಪ್ರಯೋಗಗಳನ್ನು ನಿರ್ದೇಶಕರು ಮಾಡಿದ್ದಾರೆ. ಈ ಪ್ರಯೋಗಗಳೇ ಸಿನಿಮಾದ ಜೀವಾಳ ಎಂದಿರುವ ಶ್ರಿಶ, ಕನ್ನಡದ ಪ್ರೇಕ್ಷಕರಿಗೆ ಮೋಜೊ ಇಷ್ಟವಾಗಲಿದೆ ಎಂದು ಹೇಳಿದ್ದಾರೆ.


ಸಿನಿಮಾದ ಮೇಕಿಂಗ್‌, ಕತೆ ಮತ್ತು ತಂತ್ರಜ್ಞಾನದ ಬಳಕೆಯಿಂದಾಗಿ ಮೋಜೊ ವಿಭಿನ್ನವಾಗಿ ಮೂಡಿ ಬಂದಿದೆಯಂತೆ. ಈ ಕುರಿತು ಅವರು ಮಾತನಾಡಿದ್ದಾರೆ.

'ಇದೊಂದು ಹೊಸ ಜಾನರ್‌ಗೆ ಸೇರುವ ಸಿನಿಮಾ. ಇಂತಹ ಚಿತ್ರಗಳು ಕನ್ನಡದಲ್ಲಿ ಅಪರೂಪ. ಕಥಾ ನಾಯಕನ ಮುಂದೆ ನಡೆಯುವ ಘಟನೆಗಳು, ಆತನಿಗೆ ಮೊದಲೇ ತಿಳಿದಿರುತ್ತವೆ. ಅಂಥದ್ದೊಂದು ಶಕ್ತಿ ಅವನಲ್ಲಿ ಇರುತ್ತದೆ. ಆ ಘಟನೆಗಳು ಯಾವವು? ಅವನಿಗೆ ಹೇಗೆ ತಿಳಿಯುತ್ತದೆ ಎಂಬ ರೋಚಕ ಕತೆಯು ಸಿನಿಮಾದಲ್ಲಿದೆ. ಪ್ರತಿ ಕ್ಷಣವೂ ಪ್ರೇಕ್ಷಕನಿಗೆ ಇದು ಥ್ರಿಲ್‌ ನೀಡುತ್ತಲೇ ಹೋಗುತ್ತದೆ' ಅಂತಾರೆ ನಿರ್ದೇಶಕರು.ಸ್ಯಾಂಡಲ್‌ವುಡ್‌ಗೆ ಇದು ಹೊಸ ಕಾನ್ಸೆಪ್ಟ್‌ ಆಗಿರುವುದರಿಂದ ಮತ್ತು ಪ್ರತಿ ಹಂತದಲ್ಲೂ ಕತೆಯಲ್ಲಿ ಟ್ವಿಸ್ಟ್‌ ಇರುವುದರಿಂದ ಬಹುತೇಕ ದೃಶ್ಯಗಳು ನೋಡುಗನನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತವೆಯಂತೆ. ಸಿನಿಮಾದೊಂದಿಗೆ ಪ್ರೇಕ್ಷಕ ಕೂಡ ಕನೆಕ್ಟ್ ಆಗುತ್ತಾ ಸಾಗುತ್ತಾನಂತೆ. ಹಾಗಾಗಿ ಪ್ರೇಕ್ಷಕ ಕೂಡ ಸಿನಿಮಾದ ಒಂದು ಭಾಗವಾಗುವ ಅಪರೂಪದ ಪ್ರಯೋಗ ಸಿನಿಮಾದಲ್ಲಿ ಆಗಿದೆ.

ಮನು ನಾಯಕನಾಗಿ ನಟಿಸಿದ್ದು, ಅನುಷಾ ನಾಯಕಿ. ನಾಯಕ ಪತ್ರಕರ್ತನಾದರೆ, ನಾಯಕಿ ಮನೋವೈದ್ಯೆ. ಈ ಕಾಂಬಿನೇಷನ್‌ ಕೂಡ ಸಿನಿಮಾದ ಪ್ಲಸ್‌ ಪಾಯಿಂಟ್‌. ಚಿತ್ರೀಕರಣಕ್ಕೂ ಮೊದಲು ಈ ಜೋಡಿ ರಿಹರ್ಸಲ್‌ ಮಾಡಿ ಪಾತ್ರ ನಿರ್ವಹಿಸಿದ್ದಾರಂತೆ.
ಟೆಕ್ನಿಕಲಿ ಕೂಡಾ ಸಿನಿಮಾ ಸ್ಟ್ರಾಂಗ್‌ ಆಗಿದೆಯಂತೆ. ಅರವಿಂದ್‌ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿದ್ದು, ಸಿನಿಮಾಟೋಗ್ರಫಿ ಕೂಡ ಕತೆಗೆ ಪೂರಕವಾಗಿದೆ. ಗಜಾನನ ಭಟ್‌ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದೆ.
ಈಗಾಗಲೇ ಮೋಜೊ ಚಿತ್ರ ಕೆಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಕ್ಯಾಲಿಫೋರ್ನಿಯಾದ ಫಾಗ್‌ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಕೂಡ ಪಡೆದಿದೆ. ಲಾಸ್‌ ಏಂಜಲೀಸ್‌, ಗ್ಲೆಂಡೇಲ್‌ ಹಾಗೂ ಗೋಲ್ಡನ್‌ ಗೇಟ್‌ ಚಿತ್ರೋತ್ಸವಗಳಿಗೂ ಆಯ್ಕೆಯಾಗಿದೆ.

'ಮೋಜೊ ಸಿನಿಮಾ ಪ್ರೇಕ್ಷಕನಿಗೆ ಹತ್ತಿರವಾಗುತ್ತಲೇ, ಚಿತ್ರದೊಂದಿಗೆ ಅವರನ್ನೂ ಕರೆದುಕೊಂಡು ಹೋಗುತ್ತದೆ. ಹೊಸ ಅನುಭವ ನೀಡುವ ಅನೇಕ ಪ್ರಯೋಗಗಳು ಸಿನಿಮಾದಲ್ಲಿವೆ. ಅವೇ ಸಿನಿಮಾದ ಜೀವಾಳ ಕೂಡ.'
ಆರನೇ ಸೆನ್ಸ್‌ ಬಗ್ಗೆ ಹೇಳುವ ಮೋಜೊ ಆರನೇ ಸೆನ್ಸ್‌ ಬಗ್ಗೆ ಹೇಳುವ ಮೋಜೊ Reviewed by VIVEKARAMA on ಅಕ್ಟೋಬರ್ 28, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.