ಸ್ವಚ್ಛತೆ ಬಗ್ಗೆ ಫೇಸ್‌ಬುಕ್‌ನಲ್ಲಿ ಬಾಹುಬಲಿ ಪ್ರಭಾಸ್‌ ಸ್ಫೂರ್ತಿದಾಯಕ ಸಂದೇಶ

ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ನಟ ಪ್ರಭಾಸ್ ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಅವರ ಅಭಿಮಾನಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ.


ಮಹಾತ್ಮ ಗಾಂಧೀಜಿಯವರು ದೇಶದ ಸ್ವಚ್ಛತೆಗಾಗಿ ಶ್ರಮಿಸಿದ್ದರು. ಈ ಬಾರಿ ನಡೆಯಲಿರುವ ಸ್ವಚ್ಛ ಭಾರತ್ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಳ್ಳುತ್ತಿದ್ದೇನೆ. ಕೆಲವೊಮ್ಮೆ ವೈಯಕ್ತಿಕವಾಗಿ ಈ ವಿಷಯದ ಬಗ್ಗೆ ಯೋಚಿಸುತ್ತೇನೆ. ದೇಶದ ನಾಗರಿಕನಾಗಿ ಇದು ನಮ್ಮ ಕರ್ತವ್ಯ ಮಾತ್ರ ಅಲ್ಲ ಇದು ಹವ್ಯಾಸ ಆಗಬೇಕೆಂದು ಅವರು ಹೇಳಿದ್ದಾರೆ.

ಈ ರೀತಿಯ ಯೋಚನೆ ಮಾಡುವ ನಾವೆಲ್ಲ ಸೇರಿಕೊಂಡು ಭಾರತವನ್ನು ಸ್ವಚ್ಛವಾಗಿ ಇಡೋಣ ಹಾಗೂ ನಾವೆಲ್ಲರೂ ಜೊತೆಯಾಗಿದ್ದರೆ ಭಾರತವನ್ನು ಇನ್ನಷ್ಟು ಸುಂದರವಾಗಿಸಬಹುದು ಎಂದು ಪ್ರಭಾಸ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸ್ವಚ್ಛತೆ ಬಗ್ಗೆ ಫೇಸ್‌ಬುಕ್‌ನಲ್ಲಿ ಬಾಹುಬಲಿ ಪ್ರಭಾಸ್‌ ಸ್ಫೂರ್ತಿದಾಯಕ ಸಂದೇಶ ಸ್ವಚ್ಛತೆ ಬಗ್ಗೆ ಫೇಸ್‌ಬುಕ್‌ನಲ್ಲಿ ಬಾಹುಬಲಿ ಪ್ರಭಾಸ್‌ ಸ್ಫೂರ್ತಿದಾಯಕ ಸಂದೇಶ Reviewed by VIVEKARAMA on ಅಕ್ಟೋಬರ್ 07, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.