ಸ್ಯಾಂಡಲ್ ವುಡ್ ಸಿನಿಮಾರಂಗದ ಸುಂದರ ಸಹೋದರಿಯರು ಇವರೇ ನೋಡಿ

ಕನ್ನಡ ಚಿತ್ರರಂಗದಲ್ಲಿ ಈಗ ಅಕ್ಕ ತಂಗಿಯರ ಜೋಡಿ ಮೋಡಿ ಮಾಡುತ್ತಿದೆ. ಒಟ್ಟಿಗೆ ಬೆಳೆದು ಸ್ಕೂಲ್, ಕಾಲೇಜಿನಲ್ಲಿ ಮಾರ್ಕ್ ಗಾಗಿ ಪೈಪೋಟಿ ನಡೆಸುತ್ತಿದ್ದ ಇವರು ಈಗ ಚಿತ್ರರಂಗದಲ್ಲಿಯೂ ಒಬ್ಬರಿಗೆ ಒಬ್ಬರು ಸ್ಪರ್ಧೆ ನೀಡುತ್ತಿದ್ದಾರೆ.


ಈಗಾಗಲೇ ಅನೇಕ ಅಕ್ಕ ತಂಗಿಯರ ಜೋಡಿ ಬೆಳ್ಳಿ ಪರದೆ ಮೇಲೆ ಮಿಂಚಿದೆ.

ರಚಿತಾ ರಾಮ್ - ನಿತ್ಯಾ ರಾಮ್


ಡಿಂಪಲ್ ಕ್ವೀನ್ ರಚಿತಾ ರಾಮ್ ಅಕ್ಕ ನಿತ್ಯಾ ರಾಮ್ ಕೂಡ ಈಗಾಗಲೇ ಸಿನಿಮಾ ಮಾಡಿದ್ದಾರೆ. ಸದ್ಯ ತಂಗಿ ರಚಿತಾ ರಾಮ್ ಬಿಗ್ ಸ್ಕ್ರೀನ್ ನಲ್ಲಿ ದೊಡ್ಡ ಸ್ಟಾರ್ ಆಗಿದ್ದರೆ, ಅಕ್ಕ ನಿತ್ಯಾ ರಾಮ್ ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ.


ಸಂಜನಾ ಗರ್ಲಾನಿ - ನಿಕ್ಕಿ ಗರ್ಲಾನಿ


ಒಂದು ಕಡೆ ಸಿನಿಮಾ ಇನ್ನೊಂದು ಕಡೆ ತಮ್ಮ ವಿವಾದದ ಮೂಲಕ ಸಂಜನಾ ಯಾವಾಗಲು ಸುದ್ದಿಯಲ್ಲಿ ಇರುತ್ತಾರೆ. ಇತ್ತ ಅವರ ತಂಗಿ ನಿಕ್ಕಿ ಗರ್ಲಾನಿ ತಮಿಳು ಮತ್ತು ಮಲೆಯಾಳಂ ನಲ್ಲಿ ಸಾಕಷ್ಟು ಚಿತ್ರಗಳನ್ನು ಮಾಡಿದ್ದಾರೆ.

ಆಶಿಕಾ - ಅನುಷಾ

'ಮುಗುಳುನಗೆ' ಚೆಲುವೆ ಆಶಿಕಾ ಸ್ಯಾಂಡಲ್ ವುಡ್ ನಲ್ಲಿ ದಿನೇ ದಿನೇ ಮಿಂಚುತ್ತಿದ್ದಾರೆ. ಅವರ ಅಕ್ಕ ಅನುಷಾ ಸಹ ಈ ಹಿಂದೆ 'ಸೋಡಾಬುಡ್ಡಿ' ಚಿತ್ರ ಮಾಡಿದ್ದು, ಸದ್ಯ ಅನುಷಾ 'ಒನ್ಸ್ ಮೋರ್ ಕೌರವ' ಸಿನಿಮಾದಲ್ಲಿ ನಟಿಸಿದ್ದಾರೆ.

ಸೋನು ಗೌಡ - ನೇಹ ಗೌಡ


'ಇಂತಿ ನಿನ್ನ ಪ್ರೀತಿಯ' ಖ್ಯಾತಿಯ ಸೋನು ಗೌಡ ಸಿನಿಮಾರಂಗದಲ್ಲಿ ಹೆಸರು ಮಾಡಿದ್ದರೆ, ಅವರ ಸಹೋದರಿ ನೇಹ ಗೌಡ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿದ್ದಾರೆ.


ಸ್ಯಾಂಡಲ್ ವುಡ್ ಸಿನಿಮಾರಂಗದ ಸುಂದರ ಸಹೋದರಿಯರು ಇವರೇ ನೋಡಿ ಸ್ಯಾಂಡಲ್ ವುಡ್ ಸಿನಿಮಾರಂಗದ ಸುಂದರ ಸಹೋದರಿಯರು ಇವರೇ ನೋಡಿ Reviewed by VIVEKARAMA on ಅಕ್ಟೋಬರ್ 04, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.