ನಾನ್‌ ಅರ್ಜುನ್‌ ರೆಡ್ಡಿ ಆಗಲ್ಲ- ಪ್ರದೀಪ್‌

ನಟ ಪ್ರದೀಪ್‌ "ಟೈಗರ್‌' ನಂತರ ಮತ್ಯಾವ ಸಿನಿಮಾ ಮಾಡ್ತಾರೆ ಎಂಬ ಪ್ರಶ್ನೆ ಇತ್ತು. ಅಲ್ಲೆಲ್ಲೋ ಒಂದು ಕಡೆ, ಪ್ರದೀಪ್‌ "ಅರ್ಜುನ್‌ ರೆಡ್ಡಿ' ಚಿತ್ರ ರಿಮೇಕ್‌ ಮಾಡ್ತಾರೆ ಅನ್ನೋ ಸುದ್ದಿ ಜೋರಾಗಿ ಓಡಾಡತೊಡಗಿತು. ಈ ಬಗ್ಗೆ "ಉದಯವಾಣಿ' ಸ್ವತಃ ಪ್ರದೀಪ್‌ ಅವರನ್ನೇ ಮಾತನಾಡಿಸಿದಾಗ, ಪ್ರದೀಪ್‌ ಹೇಳಿದ್ದೇನು ಗೊತ್ತಾ?"ಎಲ್ಲಾ ಕಡೆ ನಾನು "ಅರ್ಜುನ್‌ ರೆಡ್ಡಿ' ಸಿನಿಮಾ ಮಾಡ್ತೀನಿ ಅಂತ ಸುದ್ದಿಯಾಗಿದೆ. ಆ ಸುದ್ದಿಯನ್ನು ಯಾರು ಮಾಡಿದರೋ ಗೊತ್ತಿಲ್ಲ. ಅಷ್ಟಕ್ಕೂ ಯಾರು ನನ್ನ ಕೇಳಿಲ್ಲ. ಯಾರ ಕಡೆಯಿಂದಲೂ ಫೋನ್‌ ಕಾಲ್‌ ಬಂದಿಲ್ಲ. ಆದರೂ, ಸುದ್ದಿಯಾಗಿದೆ. ಒಂದು ವೇಳೆ "ಅರ್ಜುನ್‌ ರೆಡ್ಡಿ' ಸಿನಿಮಾ ಮಾಡಬೇಕು ಅಂತ ಬಂದರೆ, ಸ್ವಲ್ಪ ಚೇಂಜಸ್‌ ಮಾಡಿಕೊಳ್ಳುವುದಾದರೆ ಮಾತ್ರ ಮಾಡ್ತೀನಿ.

ಯಾಕೆಂದರೆ, ಇಲ್ಲಿನವರು ಅದರಲ್ಲಿರುವ ಕೆಲ ಅಂಶಗಳನ್ನು ಒಪ್ಪಲ್ಲ. ನನ್ನದೂ ಒಂದು ಮ್ಯಾನರಿಸಂ ಇದೆ. ಸೋ, ಒಂದು ಅದ್ಭುತ ಸಿನಿಮಾವನ್ನು ಮಾಡಲ್ಲ ಅಂತ ಹೇಳಲ್ಲ. ಆದರೆ, ಯಾರೂ ಬಂದೇ ಇಲ್ಲ, ಆದರೂ ಸುದ್ದಿಯಾದರೆ ಹೇಗೆ' ಎಂದು ಪ್ರಶ್ನಿಸುತ್ತಾರೆ ಪ್ರದೀಪ್‌.

ಹಾಗಾದರೆ, ಪ್ರದೀಪ್‌ ಈಗ ಏನ್ಮಾಡುತ್ತಿದ್ದಾರೆ, ಯಾವ ಸಿನಿಮಾ ಒಪ್ಪಿದ್ದಾರೆ. ಇದಕ್ಕೆ ಉತ್ತರಿಸುವ ಪ್ರದೀಪ್‌, "ಯೋಗರಾಜ್‌ ಭಟ್‌ ಅವರೊಂದಿಗೆ ಒಂದು ಸಿನಿಮಾ ಮಾಡುತ್ತಿದ್ದೇನೆ. ಇನ್ನೊಂದು ಸಿನಿಮಾವನ್ನು ಗೌಸ್‌ಪೀರ್‌ ಜತೆ ಮಾಡುತ್ತಿದ್ದೇನೆ. ಈಗಾಗಲೇ ಗೌಸ್‌ಪೀರ್‌ ಹೇಳಿದ ಮೊದಲರ್ಧ ಕಥೆ ಇಷ್ಟವಾಗಿದೆ.

ದ್ವಿತಿಯಾರ್ಧವನ್ನು ಚಿತ್ರಕಥೆ ಸಮೇತ ಹೇಳಬೇಕಿದೆ. ಕಥೆ ಚೆನ್ನಾಗಿದೆ. ಉಳಿದಂತೆ ಭಟ್ಟರ ಜತೆಗೊಂದು ಪ್ಲಾನಿಂಗ್‌ ನಡೆಯುತ್ತಿದೆ. ಅದು ಯಾವಾಗ, ಏನು, ಎತ್ತ ಎಂಬುದು ನನಗೇ ಗೊತ್ತಿಲ್ಲ. ಒಟ್ಟಾರೆ, ಎರಡು ಚಿತ್ರ ಆಗುವುದು ಗ್ಯಾರಂಟಿ' ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ಪ್ರದೀಪ್‌.


ನಾನ್‌ ಅರ್ಜುನ್‌ ರೆಡ್ಡಿ ಆಗಲ್ಲ- ಪ್ರದೀಪ್‌ ನಾನ್‌ ಅರ್ಜುನ್‌ ರೆಡ್ಡಿ ಆಗಲ್ಲ- ಪ್ರದೀಪ್‌ Reviewed by VIVEKARAMA on ಅಕ್ಟೋಬರ್ 24, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.