ವಿಲನ್‌ ಮೇಲೆ ಕಿರಿಕ್‌ ಹುಡುಗಿಯ ಲವ್‌

ಸಿನಿಮಾಗಳಲ್ಲಿ ಸಾಮಾನ್ಯವಾಗಿ ಹೀರೋಗಳನ್ನು ಇಷ್ಟ ಪಡುವ ನಾಯಕಿಯರನ್ನು ನೋಡುತ್ತೇವೆ. ಆದರೆ, 'ಕಾಲೇಜ್‌ ಕುಮಾರ್‌' ಸಿನಿಮಾದಲ್ಲಿ ಇದು ಉಲ್ಟಾ ಆಗಿದೆ. ನಾಯಕಿ ಸಂಯುಕ್ತ ಹೆಗಡೆ ವಿಲನ್‌ನನ್ನು ಪ್ರೀತಿಸುವಂಥ ಪಾತ್ರವನ್ನು ಈ ಸಿನಿಮಾದಲ್ಲಿ ನಿರ್ವಹಿಸಿದ್ದಾರೆ. ಯಾಕೆ, ಏನು ಅನ್ನುವುದನ್ನು ಸಿನಿಮಾದಲ್ಲಿಯೇ ನೋಡಬೇಕಂತೆ. ಹಾಗಾದರೆ, ನಾಯಕನನ್ನು ನಾಯಕಿ ಪ್ರೀತಿಸುವುದಿಲ್ಲವಾ? ಎಂಬ ಪ್ರಶ್ನೆಗೆ ನಿರ್ದೇಶಕ ಸಂತು ಹೇಳುವುದು ಹೀಗೆ, 'ಸಿನಿಮಾದ ಕತೆಯನ್ನು ಈಗಲೇ ಹೇಳುವುದು ಕಷ್ಟ. ಸಿನಿಮಾದಲ್ಲಿಯೇ ನೋಡಲಿ. ಆದರೆ, ಕಥಾನಾಯಕಿಗೆ ವಿಲನ್‌ ರೀತಿಯ ವ್ಯಕ್ತಿಗಳು ಕಂಡರೆ ಇಷ್ಟ. ಆಕೆಗೆ ಸಾಫ್ಟ್‌ ಹುಡುಗರು ಕಂಡರೆ ಆಗಲ್ಲ. ಅವಳು ಒಂದು ರೀತಿಯ ವಿಚಿತ್ರ ಕ್ಯಾರೆಕ್ಟರ್‌. ಅವಳು ಹಾಗೆ ಇರುವುದಕ್ಕೆ ಕಾರಣವೂ ಇದೆ. ಅದು ಸಿನಿಮಾದ ಪ್ರಮುಖ ಅಂಶ ಕೂಡ. ಇಡೀ ಸಿನಿಮಾವನ್ನು ಫ್ರೆಶ್‌ ಆಗಿ ಕಟ್ಟಿಕೊಟ್ಟಿದ್ದೇನೆ' ಅಂತಾರೆ.


ಕಿರಿಕ್‌ ಪಾರ್ಟಿಯ ನಂತರ ಮತ್ತೊಂದು ಹೊಸ ರೀತಿಯ ಪಾತ್ರವನ್ನು ಸಂಯುಕ್ತ, ಕಾಲೇಜ್‌ ಕುಮಾರ್‌ ಚಿತ್ರದಲ್ಲಿ ನಿರ್ವಹಿಸುತ್ತಿದ್ದಾರೆ. ಕೆಲ ದೃಶ್ಯಗಳಲ್ಲೂ ಫೈಟ್‌ ಕೂಡ ಮಾಡಿದ್ದಾರೆ. ಆ್ಯಕ್ಷನ್‌ ಸನ್ನಿವೇಶದಲ್ಲಿ ಪಾಲ್ಗೊಳ್ಳಲು ದೇಹ ದಂಡಿಸಿದ್ದಾರಂತೆ.ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಸಂಯುಕ್ತ ಅಷ್ಟೇ ಧೈರ್ಯವಂತೆ. ನಿಜ ಜೀವನದಲ್ಲೂ ಫೈಟಿಂಗ್‌ ಮಾಡಿದ್ದಾರಂತೆ. 'ಅದೆಂತಹ ಸನ್ನಿವೇಶ ಬಂದರೂ ಎದುರಿಸುವಂತಹ ಧೈರ್ಯ ನನಗಿದೆ. ಸ್ವಯಂ ರಕ್ಷಣೆಯ ಬಗ್ಗೆ ಸಿನಿಮಾ ರಂಗಕ್ಕೆ ಬರುವ ಮುಂಚಿನಿಂದಲೂ ನನಗೆ ಕಾಳಜಿ ಇದೆ' ಅಂತಾರೆ ಸಂಯುಕ್ತ. ಹಾಗಾಗಿ ಕಾಲೇಜ್‌ ಕುಮಾರ್‌ ಸಿನಿಮಾದಲ್ಲಿ ಆ್ಯಕ್ಷನ್‌ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವಾಗ ಭಯವಾಗಲಿಲ್ಲವಂತೆ.
ಅಂದಹಾಗೆ ಅಲೆಮಾರಿ ಖ್ಯಾತಿಯ ಸಂತು ನಿರ್ದೇಶನದ ಚಿತ್ರವಿದು. ಎಂಆರ್‌ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ಎಲ್‌, ಪದ್ಮನಾಭ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೆಂಡಸಂಪಿಗೆ ಚಿತ್ರ ಖ್ಯಾತಿಯ ವಿಕ್ಕಿ ಈ ಸಿನಿಮಾದ ನಾಯಕ. ರವಿಶಂಕರ್‌ ಮತ್ತು ಶೃತಿ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಲನ್‌ ಮೇಲೆ ಕಿರಿಕ್‌ ಹುಡುಗಿಯ ಲವ್‌ ವಿಲನ್‌ ಮೇಲೆ ಕಿರಿಕ್‌ ಹುಡುಗಿಯ ಲವ್‌ Reviewed by VIVEKARAMA on ಅಕ್ಟೋಬರ್ 23, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.