ಕನ್ನಡ ಚಿತ್ರದಲ್ಲಿ ನಟಿಸಿರುವ ಈ ನಟನ ಕಾಮಿಡಿಗೆ ಫ್ಯಾನ್ ಆದ ದೀಪಿಕಾಪಡುಕೋಣೆ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈಗ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಒಬ್ಬ ನಟನಿಗೆ ಫಿದಾ ಆಗಿದ್ದಾರೆ. ಆ ನಟ ಬೇರೆ ಯಾರು ಅಲ್ಲ 'ಹಂಬಲ್ ಪೊಲಿಟಿಶಿಯನ್ ನಾಗರಾಜ್' ಅರ್ಥಾತ್ ನಟ ಡ್ಯಾನಿಷ್ ಸೇಠ್.


ಇತ್ತೀಚಿಗಷ್ಟೆ ನಟಿ ದೀಪಿಕಾ, ಡ್ಯಾನಿಷ್ ಸೇಠ್ ಅವರ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಡ್ಯಾನಿಷ್ ಕಾಮಿಡಿಗೆ ದೀಪಿಕಾ ಹೊಟ್ಟೆ ಹುಣ್ಣಾಗುವಂತೆ ನಕ್ಕರು. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಹೊಂದಿರುವ ಡ್ಯಾನಿಷ್ ಅವರಿಗೆ ನಾನು ಫ್ಯಾನ್ ಎಂದು ನಟಿ ದೀಪಿಕಾ ಹೇಳಿದ್ದಾರೆ.


ತನ್ನ ವಿಭಿನ್ನ ಮ್ಯಾನರಿಸಂ ಮೂಲಕ ಈಗಾಗಲೇ ಡ್ಯಾನಿಷ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಟ ನಟಿಯರೇ ಡ್ಯಾನಿಷ್ ಕಾಮಿಡಿಗೆ ಫಿದಾ ಆಗಿದ್ದಾರೆ. ಇಂತಹ ಪ್ರತಿಭಾವಂತ ನಟ ಡ್ಯಾನಿಷ್ ಸೇಠ್ 'ಹಂಬಲ್ ಪೊಲಿಟಿಶಿಯನ್ ನಾಗರಾಜ್' ಆಗಿ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ.
ಕನ್ನಡ ಚಿತ್ರದಲ್ಲಿ ನಟಿಸಿರುವ ಈ ನಟನ ಕಾಮಿಡಿಗೆ ಫ್ಯಾನ್ ಆದ ದೀಪಿಕಾಪಡುಕೋಣೆ ಕನ್ನಡ ಚಿತ್ರದಲ್ಲಿ ನಟಿಸಿರುವ ಈ ನಟನ ಕಾಮಿಡಿಗೆ ಫ್ಯಾನ್ ಆದ ದೀಪಿಕಾಪಡುಕೋಣೆ Reviewed by VIVEKARAMA on ಅಕ್ಟೋಬರ್ 21, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.