'ಲಂಡನ್'ನಲ್ಲಿ ದರ್ಶನ್ ಗೆ ಸನ್ಮಾನ: ಶುಭಕೋರಿದ ಪತ್ನಿ ವಿಜಯಲಕ್ಷ್ಮಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಲಂಡನ್ ಪಾರ್ಲಿಮೆಂಟ್ ನಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ ಹಿನ್ನೆಲೆ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಶುಭಕೋರಿದ್ದಾರೆ. ವಿಶೇಷ ಅಂದ್ರೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು, ತಮ್ಮ ಪತಿಗೆ ವಿಶ್ ಮಾಡಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಕನ್ನಡ ಚಿತ್ರರಂಗಕ್ಕೆ ಚಾಲೆಂಜಿಂಗ್ ಸ್ಟಾರ್ ಸಲ್ಲಿಸಿದ ಕೊಡುಗೆಯನ್ನ ಗೌರವಿಸಿ ಲಂಡನ್ ನಲ್ಲಿ 'ಗ್ಲೋಬಲ್ ಇಂಟಿಗ್ರಿಟಿ ಅವಾರ್ಡ್' ನೀಡಿ ಸತ್ಕರಿಸಲಾಗಿದೆ. ದಾಖಲೆಗಳ ಪ್ರಕಾರ ಈ ಪ್ರಶಸ್ತಿ ಪಡೆದ ಕನ್ನಡದ ಮೊದಲ ನಟ ಎಂದು ಹೇಳಲಾಗ್ತಿದೆ.


ಪ್ರಶಸ್ತಿ ಪಡೆಯುವುದಕ್ಕೆ ಮುಂಚೆಯೇ ಫೋಟೋ ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದ ವಿಜಯಲಕ್ಷ್ಮಿ ಅವರು, ಯುಕೆ ಪಾರ್ಲಿಮೆಂಟ್ ನಲ್ಲಿ ಸನ್ಮಾನಿಸಿದ ನಂತರ ದರ್ಶನ್ ಅವರಿಗೆ ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ.


ಲಂಡನ್ ಪಾರ್ಲಿಮೆಂಟ್ ನಲ್ಲಿ 'ಗ್ಲೋಬಲ್ ಇಂಟಿಗ್ರಿಟಿ ಅವಾರ್ಡ್' ಪಡೆಯಲು ನಟ ದರ್ಶನ್ ಅವರು, ತಮ್ಮ ಮಗ ವಿನೀಶ್ ಅವರನ್ನ ಕೂಡ ಕರೆದುಕೊಂಡು ಹೋಗಿದ್ದರು. ಬ್ರಿಟಿಷ್ ನಾಡಲ್ಲಿ ಅಪ್ಪ-ಮಗ ಇಬ್ಬರು ಸೂಟ್ ಧರಿಸಿ ಜಬರ್ ದಸ್ತ್ ಆಗಿ ಮಿಂಚಿದ್ದಾರೆ.


'ಲಂಡನ್'ನಲ್ಲಿ ದರ್ಶನ್ ಗೆ ಸನ್ಮಾನ: ಶುಭಕೋರಿದ ಪತ್ನಿ ವಿಜಯಲಕ್ಷ್ಮಿ 'ಲಂಡನ್'ನಲ್ಲಿ ದರ್ಶನ್ ಗೆ ಸನ್ಮಾನ: ಶುಭಕೋರಿದ ಪತ್ನಿ ವಿಜಯಲಕ್ಷ್ಮಿ Reviewed by VIVEKARAMA on ಅಕ್ಟೋಬರ್ 21, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.