'ಲಂಡನ್ ಪಾರ್ಲಿಮೆಂಟ್'ನಿಂದ ನಟ ದರ್ಶನ್ ಗೆ ಮಹೋನ್ನತ ಪ್ರಶಸ್ತಿ.!

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಂಡನ್ ಪಾರ್ಲಿಮೆಂಟ್ ನಿಂದ ಮಹೋನ್ನತ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ. ಬ್ರಿಟನ್ ಪಾರ್ಲಿಮೆಂಟ್ ನಿಂದ ನೀಡುವ 'ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ'ಗೆ ಕನ್ನಡದ ನಟ ದರ್ಶನ್ ಭಾಜನರಾಗುತ್ತಿದ್ದಾರೆ.

ಇದುವರೆಗೂ ನಾಲ್ಕು ಜನ ಬಾಲಿವುಡ್ ನಟರು ಪಡೆದುಕೊಂಡಿರುವ ಈ ಪ್ರಶಸ್ತಿ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಪಾಲಾಗುತ್ತಿದ್ದು, ಅದರಲ್ಲೂ ಕನ್ನಡ ನಟ ಪಡೆಯುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಹಿರಿಮೆ ತಂದಿದೆ.
ಅಷ್ಟಕ್ಕೂ, ದರ್ಶನ್ ಅವರನ್ನ ಲಂಡನ್ ಸರ್ಕಾರ ಗೌರವಿಸುತ್ತಿರುವುದೇಕೆ? ಪ್ರಶಸ್ತಿ ಯಾವಾಗ ಸ್ವೀಕರಿಸಲಿದ್ದಾರೆ ಎಂಬ ಸಂಪೂರ್ಣ ಮಾಹಿತಿ


ದರ್ಶನ್ ಗೆ ಲಂಡನ್ ಸರ್ಕಾರದಿಂದ ಗೌರವ 
ಕನ್ನಡ ಚಿತ್ರರಂಗಕ್ಕೆ ನಟ ದರ್ಶನ್ ಅವರು ನೀಡಿರುವ ಕೊಡುಗೆಯನ್ನ ಪರಿಗಣಿಸಿ ಲಂಡನ್ ಪಾರ್ಲಿಮೆಂಟ್ ದರ್ಶನ್ ಅವರನ್ನ ಗೌರವಿಸಲು ಆಹ್ವಾನಿಸಿದೆ. ಬ್ರಿಟನ್ ಪಾರ್ಲಿಮೆಂಟ್ ನಿಂದ ನೀಡುವ 'ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ' ನೀಡಿ ಸನ್ಮಾನಿಸಲಿದೆ.


ದಕ್ಷಿಣ ಭಾರತದ ಮೊದಲ ನಟ 
ಲಂಡನ್ ಪಾರ್ಲಿಮೆಂಟ್ ನಲ್ಲಿ ಈ ಗೌರವಕ್ಕೆ ಪಾತ್ರವಾಗುತ್ತಿರುವ ದಕ್ಷಿಣ ಭಾರತದ ಮೊದಲ ನಟ ಹಾಗೂ ಕನ್ನಡದ ಮೊದಲ ನಟ ಎಂಬ ಹೆಗ್ಗಳಿಕೆಗೆ ನಟ ದರ್ಶನ್ ಗೆ ಸಲ್ಲುತ್ತದೆ.


ಅಕ್ಟೋಬರ್ 19 ರಂದು ಕಾರ್ಯಕ್ರಮ 
ಅಕ್ಟೋಬರ್ 19 ರಂದು ಲಂಡನ್ ಪಾರ್ಲಿಂಮೆಂಟ್ ನಲ್ಲಿ ದರ್ಶನ್ ಅವರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಂಡಿದ್ದು, ದರ್ಶನ್ ಅವರು ಅಕ್ಟೋಬರ್ 18 ರಂದು ಬೆಳಿಗ್ಗೆ ಲಂಡನ್ ಗೆ ತೆರಳಲಿದ್ದಾರೆ.


5ನೇ ಭಾರತೀಯ ನಟ ದರ್ಶನ್ 
ಈ ಮುಂಚೆ ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ಲಂಡನ್ ಪಾರ್ಲಿಮೆಂಟ್ ನಿಂದ ಈ ಗೌರವಕ್ಕೆ ಪಾತ್ರರಾಗಿದ್ದರು. ಈಗ ಕನ್ನಡದ ನಟ ದರ್ಶನ್ ಗೆ ಈ ಗೌರವ ಸಿಗುತ್ತಿದೆ.


'ಲಂಡನ್ ಪಾರ್ಲಿಮೆಂಟ್'ನಿಂದ ನಟ ದರ್ಶನ್ ಗೆ ಮಹೋನ್ನತ ಪ್ರಶಸ್ತಿ.! 'ಲಂಡನ್ ಪಾರ್ಲಿಮೆಂಟ್'ನಿಂದ ನಟ ದರ್ಶನ್ ಗೆ ಮಹೋನ್ನತ ಪ್ರಶಸ್ತಿ.! Reviewed by VIVEKARAMA on ಅಕ್ಟೋಬರ್ 18, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.