ಸೌತ್ ಸಿನಿಲೋಕದಲ್ಲಿ ಯಾವ ನಟನ ಎತ್ತರ ಎಷ್ಟಿದೆ?

ದಕ್ಷಿಣ ಭಾರತದ ಸ್ಟಾರ್ ನಟರ ಪೈಕಿ ಯಾರು ಅತಿ ಎತ್ತರ ಇದ್ದಾರೆ ಎಂದರೆ, ಕೆಲವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂತಾರೆ, ಮತ್ತೆ ಕೆಲವರು 'ಬಾಹುಬಲಿ' ಪ್ರಭಾಸ್ ಅಂತಾರೆ, ಇನ್ನು ಹಲವರು ಮಹೇಶ್ ಬಾಬು ಅಂತಾರೆ. ನಿಜವಾಗಲೂ ಸೌತ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಹೈಟ್ ಇರೋದು ಯಾವ ನಟ? ಹಾಗಿದ್ರೆ, ಬನ್ನಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಇಂಡಸ್ಟ್ರಿಯಲ್ಲಿ ಯಾವ ನಟನ ಎತ್ತರ ಎಷ್ಟಿದೆ ಎಂಬುದನ್ನ ನೋಡೋಣ.

ಚಾಲೆಂಜಿಂಗ್ ಸ್ಟಾರ್
ದರ್ಶನ್ ಕನ್ನಡದ ಕುತುಬ್ ಮಿನರ್ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡದಲ್ಲಿ ಅತಿ ಎತ್ತರ ಇರುವ ನಟ. ಇವರ ಎತ್ತರ 6.3 ಅಡಿ.


ಕಿಚ್ಚ ಸುದೀಪ

 ಆರಡಿ ಕಟೌಟ್, ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟ ಅಭಿನಯ ಚಕ್ರವರ್ತಿಯ ಎತ್ತರ 6.2 ಅಡಿ.


ಬಾಹುಬಲಿ ಪ್ರಭಾಸ್
ಬಾಹುಬಲಿ ಚಿತ್ರದ ಮೂಲಕ ವಿಶ್ವಖ್ಯಾತಿ ಪಡೆದ ನಟ ಪ್ರಭಾಸ್. ಟಾಲಿವುಡ್ ನಟರಲ್ಲಿ ಪ್ರಭಾಸ್ ಎತ್ತರದ ನಟರ ಪೈಕಿ ಮೊದಲನೇ ಸಾಲಿನಲ್ಲಿ ನಿಲ್ತಾರೆ. ಅಂದ್ಹಾಗೆ, ಪ್ರಭಾಸ್ ಹೈಟ್ 6.2 ಅಡಿ


ಪ್ರಿನ್ಸ್ ಮಹೇಶ್ ಬಾಬು
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಎತ್ತರ 6.1 ಅಡಿ. ಮಹೇಶ್ ಬಾಬು ಹೈಟ್ ಇಷ್ಟ ಪಡುವ ಅಭಿಮಾನಿಗಳು ತೆಲುಗು ಚಿತ್ರರಂಗದಲ್ಲಿದ್ದಾರೆ.


ರಾಣಾ ದಗ್ಗುಬಾಟಿ 
ಬಾಹುಬಲಿ ಚಿತ್ರದಲ್ಲಿ ಪ್ರಭಾಸ್ ರಂತೆ ಹೆಚ್ಚು ಗಮನ ಸೆಳೆದ ನಟ ರಾಣಾ ದಗ್ಗುಬಾಟಿ. ಕಟ್ಟುಮಸ್ತಾದ ದೇಹ ಹೊಂದಿರುವ ರಾಣಾ ಎತ್ತರ 6.3 ಅಡಿ.


ವರುಣ್ ತೇಜ 
'ಫಿದಾ' ಚಿತ್ರದ ಮೂಲಕ ಟಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿದ ನಟ ವರುಣ್ ತೇಜ ಅವರು ಸದ್ಯ, ತೆಲುಗಿನ ಅತಿ ಎತ್ತರದ ನಟ ಎಂಬ ಖ್ಯಾತಿ ಗಳಿಸಿಕೊಂಡಿದ್ದಾರೆ. ಇವರ ಎತ್ತರ 6.4 ಅಡಿ.


ತಮಿಳು ನಟ ಜೀವನ್ 
ತಮಿಳಿನ ಸೂಪರ್ ಸ್ಟಾರ್ ನಟರ ಎತ್ತರ ಬಹುತೇಕ 6 ಅಡಿಗಿಂತ ಕಡಿಮೆ ಇದೆ. ಆದ್ರೆ, ಯವನ ನಟ ಜೀವನ್ ತಮಿಳಿನಲ್ಲಿ ಅತಿ ಹೆಚ್ಚು ಎತ್ತರ ಇದ್ದಾರೆ. ಇವರ ಹೈಟ್ 6.2 ಅಡಿ.
ಸೌತ್ ಸಿನಿಲೋಕದಲ್ಲಿ ಯಾವ ನಟನ ಎತ್ತರ ಎಷ್ಟಿದೆ? ಸೌತ್ ಸಿನಿಲೋಕದಲ್ಲಿ ಯಾವ ನಟನ ಎತ್ತರ ಎಷ್ಟಿದೆ? Reviewed by VIVEKARAMA on ಅಕ್ಟೋಬರ್ 11, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.