ರಶ್ಮಿಕಾಗೆ ಅರುಂಧತಿ ನಕ್ಷತ್ರ ತೋರಿಸಿದ ಗೋಲ್ಡನ್ ಸ್ಟಾರ್!

ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೇನೋ ಮದುವೆಯಾಗಿ ಇಬ್ಬರು ಮಕ್ಕಳೂ ಇದ್ದಾರೆ. ಇನ್ನೂ ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ಹಸೆಮಣೆ ಏರುತ್ತಿದ್ದಾರೆ. ಹಾಗಿದ್ದೂ ಗೋಲ್ಡನ್ ಸ್ಟಾರ್ ಗಣೇಶ್‌ರನ್ನು ರಶ್ಮಿಕಾ ವರಿಸಿದ್ದಾರೆ! ಇದೆಲ್ಲಾ ಸಾಧ್ಯವಾಗಿದ್ದು ಹೇಗೆ ಅಂತೀರಾ?


ಇದೆಲ್ಲಾ ಸಾಧ್ಯವಾಗಿದ್ದು ’ಚಮಕ್’ ಚಿತ್ರದ ಮದುವೆ ಸೀನ್‍ನಲ್ಲಿ. ಈ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ಸತಿಪತಿಯರಾಗಿ ಕಾಣಿಸಲಿದ್ದಾರೆ. ಈ ಸಿನಿಮಾ ಚಿತ್ರೀಕರಣದ ಎಕ್ಸ್‌ಕ್ಲೂಸೀವ್ ಫೋಟೋಗಳು ನಿಮಗಾಗಿ. ಸಿಂಪಲ್ ಸುನಿ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾವನ್ನು ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ತೆರೆಗೆ ತರುತ್ತಿದ್ದಾರೆ. ಟಿ.ಆರ್ ಚಂದ್ರಶೇಖರ್ ಚಿತ್ರದ ನಿರ್ಮಾಪಕರು.


ಸಾಮಾನ್ಯವಾಗಿ ಸಿಂಪಲ್ ಸುನಿ ಸಿನಿಮಾಗಳೆಂದರೆ ಸಂಭಾಷಣೆಗೆ ಪ್ರಾಮುಖ್ಯತೆ ಇರುತ್ತದೆ. ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಗೆದ್ದವರು. ಇದೀಗ ಮತ್ತೆ ರೊಮ್ಯಾಂಟಿಕ್ ಸಬ್ಜೆಕ್ಟ್ ಕೈಗೆತ್ತಿಕೊಂಡಿರುವ ಚಮಕ್ ಚಿತ್ರದ ಬಗ್ಗೆ ನಿರೀಕ್ಷೆಗಳು ಇದ್ದೇ ಇವೆ. ಚಮಕ್ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ಇದೆ.
ರಶ್ಮಿಕಾಗೆ ಅರುಂಧತಿ ನಕ್ಷತ್ರ ತೋರಿಸಿದ ಗೋಲ್ಡನ್ ಸ್ಟಾರ್! ರಶ್ಮಿಕಾಗೆ ಅರುಂಧತಿ ನಕ್ಷತ್ರ ತೋರಿಸಿದ ಗೋಲ್ಡನ್ ಸ್ಟಾರ್! Reviewed by VIVEKARAMA on ಅಕ್ಟೋಬರ್ 10, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.