ಗೊಂಬೆ ಖ್ಯಾತಿಯ ನೇಹಾ ನಿಶ್ಚಿತಾರ್ಥ

ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಗೊಂಬೆ ಖ್ಯಾತಿಯ ನಟಿ ನೇಹಾ ಗೌಡ ಮತ್ತು ಅವರ ಬಾಲ್ಯ ಸ್ನೇಹಿತ ಚಂದನ್‌ ಅವರ ನಿಶ್ಚಿತಾರ್ಥ ಸಮಾರಂಭ ಸೆ.30ರಂದು ಬೆಂಗಳೂರಿನಲ್ಲಿ ನಡೆಯಿತು.


ಸರಳವಾಗಿ ಮನೆಯಲ್ಲಿಯೇ ನಡೆದ ಈ ಸಮಾರಂಭಕ್ಕೆ ಎರಡು ಕುಟುಂಬದ ಸದಸ್ಯರು ಮತ್ತು ಕಿರುತೆರೆಯ ಕಲಾವಿದರು ಪಾಲ್ಗೊಂಡಿದ್ದರು. ಬಾಲ್ಯದಿಂದ ಒಟ್ಟಿಗೆ ಓದಿರುವ ಚಂದನ್‌ ಮತ್ತು ನೇಹಾ ಪ್ರೀತಿಗೆ ಹದಿನಾರು ವರ್ಷವಂತೆ. ಈಗ ಮನೆಯವರು ಒಪ್ಪಿಗೆ ಪಡೆದು, ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ನೇಹಾ ಅವರ ಭಾವಿ ಪತಿ ಚಂದನ್‌ ಈಗ ಹಾಂಕಾಂಗ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂದಹಾಗೆ ನೇಹಾ, ಸ್ಯಾಂಡಲ್‌ವುಡ್‌ ನಟಿ ಸೋನು ಗೌಡ ಅವರ ಸಹೋದರಿ.


ಗೊಂಬೆ ಖ್ಯಾತಿಯ ನೇಹಾ ನಿಶ್ಚಿತಾರ್ಥ ಗೊಂಬೆ ಖ್ಯಾತಿಯ ನೇಹಾ ನಿಶ್ಚಿತಾರ್ಥ Reviewed by VIVEKARAMA on ಅಕ್ಟೋಬರ್ 02, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.