ಯಶ್-ಪುನೀತ್ ರಿಲೀಸ್ ಮಾಡಿರುವ ಟ್ರೈಲರ್ ಯಾವುದು?

ರಾಕಿಂಗ್ ಸ್ಟಾರ್ ಯಶ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಬ್ಬರು ಸೇರಿ ಹೊಸ ಚಿತ್ರದ ಟ್ರೈಲರ್ ವೊಂದನ್ನ ಬಿಡುಗಡೆ ಮಾಡಿದ್ದಾರೆ.

 'ಉಗ್ರಂ' ಚಿತ್ರಕ್ಕೆ ಸಂಗೀತ ನೀಡಿದ್ದ ರವಿ ಬಸ್ರೂರು ನಿರ್ದೇಶನ ಮಾಡಿರುವ 'ಕಟಕ' ಚಿತ್ರದ ಟ್ರೈಲರನ್ನು ಕನ್ನಡದ ಇಬ್ಬರು ಸೂಪರ್ ಸ್ಟಾರ್ ರಿಲೀಸ್ ಮಾದಿದ್ದರೆ.
 ಸೆಪ್ಟೆಂಬರ್ 30 ರಂದು ಸಂಜೆ ಬೆಂಗಳೂರಿನಲ್ಲಿ 'ಕಟಕ' ಟ್ರೈಲರ್ ರಿಲೀಸ್ ಆಗಿದೆ.


ಇದೊಂದು ಹಾರರ್ ಸ್ಟೋರಿಯಾಗಿದ್ದು, ಶ್ಲಾಘ ಸಾಲಿಗ್ರಾಮ ಎಂಬ ಬಾಲಕಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ರವಿ ಬಸ್ರೂರು ನಿರ್ದೇಶನ ಮಾಡುತ್ತಿರುವ ಮೂರನೇ ಚಿತ್ರ ಇದಾಗಿದ್ದು, ಇದಕ್ಕೂ ಮುಂಚೆ 'ಗರ್ ಗರ್ ಮಂಡ್ಲ', 'ಬಿಲಿಂದರ್' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರು.

'ಜಟ್ಟ', 'ಮೈತ್ರಿ' ಚಿತ್ರಗಳನ್ನ ನಿರ್ಮಾಣ ಮಾಡಿದ್ದ ಎನ್‌.ಎಸ್.ರಾಜಕುಮಾರ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ, ಮುಂದಿನ ತಿಂಗಳು ಸಿನಿಮಾ ತೆರೆಗೆ ಬರಲಿದೆ.
ಯಶ್-ಪುನೀತ್ ರಿಲೀಸ್ ಮಾಡಿರುವ ಟ್ರೈಲರ್ ಯಾವುದು? ಯಶ್-ಪುನೀತ್ ರಿಲೀಸ್ ಮಾಡಿರುವ ಟ್ರೈಲರ್ ಯಾವುದು? Reviewed by VIVEKARAMA on ಅಕ್ಟೋಬರ್ 02, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.