ಈ 7 ವಿಶೇಷತೆಗಳು 'ದಿ ವಿಲನ್' ಚಿತ್ರದಲ್ಲಿ ರಾಮ-ರಾವಣನ ಪವರ್ ಹೆಚ್ಚಿಸಿದೆ!

'ದಿ ವಿಲನ್' ಸಿನಿಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಸಪ್ಪಳ ಮಾಡಿದೆ. ಶಿವಣ್ಣ, ಸುದೀಪ್ ಅಭಿಮಾನಿಗಳಂತೂ ಈ ಸಿನಿಮಾ ಯಾವಾಗ ಬರುತ್ತದೆಯೋ ಎಂದು ಚಡಪಡಿಸುತ್ತಿದ್ದಾರೆ.ಅದೇನೇ ಇದ್ದರೂ 'ದಿ ವಿಲನ್' ಸಿನಿಮಾ ನಿಜಕ್ಕೂ ಸಾಮಾನ್ಯವಾದ ಸಿನಿಮಾ ಅಲ್ಲವೇ ಅಲ್ಲ. ಯಾಕಂದ್ರೆ ಈ ಚಿತ್ರದಲ್ಲಿ ಇರುವ ವಿಶೇಷತೆಗಳು ಒಂದಲ್ಲ ಎರಡಲ್ಲ. ಒಂದು ಕಡೆ ಈಗಾಗಲೇ ನಿರ್ದೇಶಕ ಪ್ರೇಮ್ ಕ್ಯಾಮರಾ ಹಿಡಿದು ಲಂಡನ್, ಬ್ಯಾಂಕಾಕ್ ಸುತ್ತಿ ಚಿತ್ರೀಕರಣ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಸಿನಿಮಾದ ಕ್ರೇಜ್ ದಿನೇ ದಿನೇ ಜೋರಾಗುತ್ತಿದೆ.


ನಿರ್ದೇಶಕ ಪ್ರೇಮ್ ಅವರ 'ದಿ ವಿಲನ್' ಸಿನಿಮಾದ ವಿಶೇಷತೆಗಳು :-
ವಿಶೇಷತೆ ನಂ 1
 'ಜೋಗಯ್ಯ' ಚಿತ್ರದ ನಂತರ ಅಂದರೆ 6 ವರ್ಷಗಳ ಬಳಿಕ ನಿರ್ದೇಶಕ ಪ್ರೇಮ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ


ವಿಶೇಷತೆ ನಂ 2
ಇದೇ ಮೊದಲ ಬಾರಿಗೆ ಕನ್ನಡದ ಇಬ್ಬರು ದಿಗ್ಗಜ ನಟರಾದ ಶಿವಣ್ಣ ಮತ್ತು ಸುದೀಪ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ವಿಶೇಷತೆ ನಂ 3
'ದಿ ವಿಲನ್' ಚಿತ್ರದ ಮೂಲಕ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ.


ವಿಶೇಷತೆ ನಂ 4
ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ನಟಿಸುತ್ತಿರುವ ಮೊದಲ ಕನ್ನಡ ಸಿನಿಮಾ 'ದಿ ವಿಲನ್'.


ವಿಶೇಷತೆ ನಂ 5
 ಕನ್ನಡ ಸಿನಿಮಾರಂಗದಲ್ಲೇ ಅತಿ ಹೆಚ್ಚು ಬಜೆಟ್ ಸಿನಿಮಾಗಳ ಪೈಕಿ 'ದಿ ವಿಲನ್' ಒಂದಾಗಿದೆ.


ವಿಶೇಷತೆ ನಂ 6
'ದಿ ವಿಲನ್' ಸಿನಿಮಾದ ಸ್ಯಾಟಲೈಟ್ ರೈಟ್ 7.3 ಕೋಟಿ ಮೊತ್ತಕ್ಕೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ.

ವಿಶೇಷತೆ ನಂ 7
ಹ್ಯಾಟಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಹ್ಯಾಟ್ರಿಕ್ ಡೈರೆಕ್ಟರ್ ಪ್ರೇಮ್ ಜೋಡಿಯ ಹ್ಯಾಟ್ರಿಕ್ ಸಿನಿಮಾ ಇದಾಗಿದೆ.

ಈ 7 ವಿಶೇಷತೆಗಳು 'ದಿ ವಿಲನ್' ಚಿತ್ರದಲ್ಲಿ ರಾಮ-ರಾವಣನ ಪವರ್ ಹೆಚ್ಚಿಸಿದೆ! ಈ 7 ವಿಶೇಷತೆಗಳು 'ದಿ ವಿಲನ್' ಚಿತ್ರದಲ್ಲಿ ರಾಮ-ರಾವಣನ ಪವರ್ ಹೆಚ್ಚಿಸಿದೆ! Reviewed by VIVEKARAMA on ಅಕ್ಟೋಬರ್ 26, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.