ಸುದೀಪ್ ಪರಿಚಯಿಸಿದ 'ಬಿಗ್ ಬಾಸ್ 5' ಅರಮನೆಯ ಅಂದ-ಚೆಂದ

ಒಂಟಿ ಮನೆ... ಮೂಲೆ ಮೂಲೆಯಲ್ಲೂ ಕ್ಯಾಮರಾ... ಹೊರಗಡೆಯಿಂದ ಅರಮನೆಯಂತೆ ಕಾಣುವ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟರೆ ಸೆರೆಮನೆಯಂತಹ ಅನುಭವ.!
ಟಿವಿ, ಮೊಬೈಲ್, ಇಂಟರ್ ನೆಟ್, ಕಂಪ್ಯೂಟರ್.... ಇದಾವುದೂ ಕೊಡದೆ, ಹೊರ ಜಗತ್ತಿನ ಸಂಪರ್ಕವೇ ಇಲ್ಲದೆ 'ಬಿಗ್ ಬಾಸ್' ಆಡಿಸಿದಂತೆ ಸ್ಪರ್ಧಿಗಳು ಆಡದೆ ಬೇರೆ ದಾರಿಯಿಲ್ಲ.

ಆಟದ ಮಾತು ಹಾಗಿರಲಿ. ಸದ್ಯಕ್ಕೆ 17 ಸ್ಪರ್ಧಿಗಳು 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿದ್ದಾರೆ. ಸ್ಪರ್ಧಿಗಳ ನಿಜವಾದ ಆಟ ಇಂದು ರಾತ್ರಿಯಿಂದ ನಿಮ್ಮೆಲ್ಲರಿಗೆ ದರ್ಶನವಾಗಲಿದೆ.

ಮೊದಲು ಗೃಹಪ್ರವೇಶ ಮಾಡಿದ ಸುದೀಪ್
ಸ್ಪರ್ಧಿಗಳು 'ಬಿಗ್ ಬಾಸ್' ಮನೆಯೊಳಗೆ ಬಲಗಾಲಿಡುವ ಮುನ್ನ ಕಿಚ್ಚ ಸುದೀಪ್ ಗೃಹಪ್ರವೇಶ ಮಾಡಿದರು. ಈ ಬಾರಿ 'ಬಿಗ್ ಬಾಸ್' ಮನೆಯ ಒಳಾಂಗಣ ಹೇಗಿದೆ ಎಂಬುದನ್ನ ವೀಕ್ಷಕರಿಗೆ ಸುದೀಪ್ ಪರಿಚಯ ಮಾಡಿಕೊಟ್ಟರು


ಹಿಂದಿನ ಸೀಸನ್ ಗಳಿಗೆ ಹೋಲಿಸಿದರೆ ಈ ಬಾರಿಯ 'ಬಿಗ್ ಬಾಸ್' ಮನೆ ದೊಡ್ಡದಾಗಿ ಹಾಗೂ ಕಲರ್ ಫುಲ್ ಆಗಿದೆ.


'ಬಿಗ್ ಬಾಸ್' ಮನೆಯ ಗೇಟ್ ತೆಗೆದ ಕೂಡಲೆ 'ಬಿಗ್ ಬಾಸ್ 5' ಎಂದು ಬೃಹದಾಕಾರವಾಗಿ ಬರೆದಿರುವುದು ಕಾಣುತ್ತದೆ. ಆದ್ರೆ, ಸುದೀಪ್ ಕಣ್ಣಲ್ಲಿ ಈ ಮನೆ '#75 ಶಾಂತಿ ನಿವಾಸ' ತರಹ ಕಾಣಿಸಿದೆ.


ಕಳೆದ ಸೀಸನ್ ಗೆ ಹೋಲಿಸಿದರೆ, ಈ ಬಾರಿಯ ಗಾರ್ಡನ್ ಏರಿಯಾ ದೊಡ್ಡದಾಗಿದೆ. ಇಲ್ಲೇ ಸ್ವಿಮ್ಮಿಂಗ್ ಪೂಲ್ ಹಾಗೂ ಜಿಮ್ ಸೆಂಟರ್ ಇದೆ.


ಮನೆಯ ಒಳಾಂಗಣಕ್ಕೆ ಕಾಲಿಡುತ್ತಿದ್ದಂತೆಯೇ, ''ಮನೆಯಲ್ಲಿ ಇರುವವರೆಲ್ಲರೂ ನಿನಗೆ ಹೂ ತೆಗೆದುಕೊಂಡು ಬರಲಿ, ನೋವು ಬೇಡ. ತಮ್ಮ ಮುಂದೆ ಪ್ರತಿ ದಿನ ಭಜನೆ ನಡೆಯಲಿ, ವಿಭಜನೆ ಬೇಡ. ಇದು ನನ್ನ ಪ್ರಾರ್ಥನೆ ಅಷ್ಟೇ. ನಿನ್ನ ಆಶೀರ್ವಾದ ಎಲ್ಲರ ಮೇಲೆ ಇರಲಿ'' ಎಂದು ದೇವಿ ಮುಂದೆ ಸುದೀಪ್ ಪ್ರಾರ್ಥಿಸಿದರು.


ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ತುಂಬಾ ಬಾಗಿಲುಗಳಿವೆ. ಅದಕ್ಕೆ ಕಾರಣ ಏನು ಅನ್ನೋದು ಸದ್ಯಕ್ಕೆ ಅಸ್ಪಷ್ಟ. ಆದ್ರೆ, ಬಾಗಿಲು ಎಷ್ಟೇ ಇದ್ದರೂ, ಕಿಟಕಿ ಮಾತ್ರ ಒಂದೇ. ಅದು ಸುದೀಪ್ ರವರ 'ಮೀ ಟಿವಿ'. ಇದರ ಮೂಲಕವೇ ಪ್ರತಿ ವಾರ ಸುದೀಪ್ ಪಂಚಾಯತಿ ನಡೆಸುತ್ತಾರೆ.


ಮನೆಯ ಹಾಲ್ ನಲ್ಲಿರುವ ಗೋಡೆ ತುಂಬಾ ಟಿವಿಗಳಿವೆ. ಆದ್ರೆ, ರಿಮೋಟ್ ಕಂಟ್ರೋಲ್ ಗಾಗಿ ಜಗಳ ಆಗದೇ ಇರುವ ಮನೆ ಅಂದ್ರೆ ಇದೊಂದೇ.! ಯಾಕಂದ್ರೆ, ಇದರಲ್ಲಿ 'ಸುದೀಪ್ ಪಂಚಾಯತಿ' ಚಾನೆಲ್ ಬಿಟ್ಟರೆ ಬೇರೇನೂ ಬರಲ್ಲ.


ಮನೆಯ ಅಡುಗೆ ಮನೆ ಬಹಳ ದೊಡ್ಡದಾಗಿದೆ. ಅಷ್ಟೇ, ಚೆನ್ನಾಗಿ ಡೆಕೋರೇಷನ್ ಕೂಡ ಮಾಡಲಾಗಿದೆ.
'ಸೊಪ್ಪಿಗಿಂತ ರುಚಿ ಇಲ್ಲ', 'ಓ ಮೈ ಲಾಡು', 'ಮುದ್ದೆ ಬಂದಿಲ್ಲ ನಂಗೆ ಮುದ್ದೆ ಬಂದಿಲ್ಲ', 'ಕೋಸಿದ್ರೆ ಕೈಲಾಸ', 'ನಮಸ್ಕಾರ ಸಾರು', 'ಎಣ್ಣೆ ನಿಂಗೆ ಸಾಟಿ ಇಲ್ಲ' ಎಂಬ ಪದಪುಂಜಗಳು ಅಡುಗೆ ಮನೆಯ ಗೋಡೆ ಮೇಲಿದೆ. ಇದರ ಅರ್ಥ ಏನು.? ಒಳಾರ್ಥ ಏನು.? ದೇವ್ರಾಣೆ ನಮಗಂತೂ ಗೊತ್ತಿಲ್ಲ.


ಇಡೀ ಮನೆ ಒಟ್ಟಾಗಿ ಕೂತು ಊಟ ಮಾಡಲು ಬೃಹತ್ ಡೈನಿಂಗ್ ಟೇಬಲ್ ಕೂಡ ಇದೆ.'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಎಷ್ಟೋ ಜಗಳ, ಕಿತ್ತಾಟ ಶುರುವಾಗಿದ್ದೇ ಬೆಡ್ ರೂಮ್ ನಲ್ಲಿ. ಈ ಬಾರಿ ಬೆಡ್ ರೂಮ್ ಹೇಗಿದೆ ಅಂತ ನೀವೇ ಕಣ್ತುಂಬಿಕೊಳ್ಳಿ.


ವಿಶೇಷ ಅಂದ್ರೆ, ಈ ಬಾರಿ ಬಾತ್ ರೂಮ್ ನಲ್ಲಿ ಸೈಕಲ್ ಇದೆ. ಯಾಕಂದ್ರೆ, ಒಳಗೆ ಹೋದವರು ಹೊರಗೆ ಬರ್ಲಿಲ್ಲ ಅಂದ್ರೆ ಬೆಲ್ ಹೊಡೆಯೋಕೆ.!!


'ದೊಡ್ಮನೆ'ಯ ಅಂದ-ಚೆಂದ 
ಒಳಾಂಗಣ ವಿನ್ಯಾಸ, ಪೀಠೋಪಕರಣ ಹಾಗೂ ಅದಕ್ಕೆ ತಕ್ಕ ಹಾಗೆ ಗೋಡೆಗಳಿಗೆ ಬಣ್ಣ... ಈ ಎಲ್ಲವೂ ಸೇರಿ ಈ ಬಾರಿ 'ಬಿಗ್ ಬಾಸ್' ಮನೆಗೆ ಹೊಸ ಮೆರುಗು ನೀಡಿದೆ. 'ದೊಡ್ಮನೆ'ಯ ಅಂದ-ಚೆಂದ ಹೆಚ್ಚಿಸಿದೆ.


ಸುದೀಪ್ ಪರಿಚಯಿಸಿದ 'ಬಿಗ್ ಬಾಸ್ 5' ಅರಮನೆಯ ಅಂದ-ಚೆಂದ ಸುದೀಪ್ ಪರಿಚಯಿಸಿದ 'ಬಿಗ್ ಬಾಸ್ 5' ಅರಮನೆಯ ಅಂದ-ಚೆಂದ Reviewed by VIVEKARAMA on ಅಕ್ಟೋಬರ್ 16, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.