ದರ್ಶನ್ 'ತಾರಕ್' ಮೊದಲ 3 ದಿನದಲ್ಲಿ ಗಳಿಸಿದ್ದೆಷ್ಟು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದಸರಾ ಹಬ್ಬದ ಪ್ರಯುಕ್ತ ಬಿಡುಗಡೆಯಾದ ಈ ಚಿತ್ರವನ್ನ ಕುಟುಂಬ ಸಮೇತ ನೋಡಿ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ.

ಇನ್ನು ತಾರಕ್ ಚಿತ್ರ ಸತತ ನಾಲ್ಕನೇ ದಿನವೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆಯುಧ ಪೂಜೆ, ವಿಜಯದಶಮಿ ಹಾಗೂ ಗಾಂಧಿ ಜಯಂತಿಯ ಹಿನ್ನೆಲೆ ಸತತ ರಜೆಯಲ್ಲಿರುವ ಅಭಿಮಾನಿಗಳಿಗೆ 'ತಾರಕ್' ಭರ್ಜರಿ ರಸದೌತಣ ನೀಡಿದೆ.

ಹಾಗಿದ್ರೆ, 'ತಾರಕ್' ಮೊದಲ ಮೂರು ದಿನದ ಕಲೆಕ್ಷನ್ ಎಷ್ಟಿರಬಹುದು?


ಬಾಕ್ಸ್ ಆಫೀಸ್ ನಲ್ಲಿ 'ತಾರಕ್' ಪರಾಕ್ರಮ 

ಸೆಪ್ಟೆಂಬರ್ 29 ರಂದು ತೆರೆಕಂಡ 'ತಾರಕ್' ಸಿನಿಮಾ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ವಿಜಯ ಪತಾಕೆ ಹಾರಿಸಿದೆ. ಸುಮಾರು 300 ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆಯಾದ 'ತಾರಕ್' ಕೇವಲ ಮೂರು ದಿನದಲ್ಲೇ ದಾಖಲೆಯ ಕಲೆಕ್ಷನ್ ಮಾಡಿದೆ.


ಮೊದಲ ದಿನ 'ತಾರಕ್' ಗಳಿಸಿದ್ದೆಷ್ಟು?

ರಾಜ್ಯಾದ್ಯಂತ ಭರ್ಜರಿಯಾಗಿ ತೆರೆಗೆ ಬಂದ 'ತಾರಕ್' ಮೊದಲ ದಿನ ಬರೋಬ್ಬರಿ 8.5 ಕೋಟಿ ಗಳಿಸಿದೆ ಎಂದು ಅಂದಾಜಿಸಲಾಗಿದೆ.

3 ದಿನಕ್ಕೆ ದಾಖಲೆಗಳು ಉಡೀಸ್


ದಸರಾ ಹಬ್ಬಕ್ಕೆ ಬಂದಿದ್ 'ತಾರಕ್' ಮೊದಲ ಮೂರು ದಿನವೂ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದೆ. ಗಾಂಧಿನಗರದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ತಾರಕ್ ಮೊದಲ ಮೂರು ದಿನದಲ್ಲಿ 25 ರಿಂದ 30 ಕೋಟಿವರೆಗೂ ಗಳಿಸಿದೆ ಎನ್ನಲಾಗುತ್ತಿದೆ.


ದರ್ಶನ್ 'ತಾರಕ್' ಮೊದಲ 3 ದಿನದಲ್ಲಿ ಗಳಿಸಿದ್ದೆಷ್ಟು? ದರ್ಶನ್ 'ತಾರಕ್' ಮೊದಲ 3 ದಿನದಲ್ಲಿ ಗಳಿಸಿದ್ದೆಷ್ಟು? Reviewed by VIVEKARAMA on ಅಕ್ಟೋಬರ್ 03, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.