ಧ್ರುವ ಸರ್ಜಾ ಕಾಲ್ ಶೀಟ್ ಗಾಗಿ 2013 ರಿಂದ ಕಾಯುತ್ತಿದ್ದೇನೆ: ಉದಯ್ ಮೆಹ್ತಾ

ಭರ್ಜರಿ ಸಿನಿಮಾ ಯಶಸ್ಸಿನ ನಂತರ ನಟ ಧ್ರುವ ಸರ್ಜಾ ಬಹು ಬೇಡಿಕೆಯ ನಟ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಸ್ಯಾಂಡಲ್ ವುಡ್ ನ ಈ ಹೊಸ ಸ್ಟಾರ್ ಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ.
ಅದ್ದೂರಿ, ಬಹದ್ದೂರ್, ಭರ್ಜರಿ ನಂತರ ಧ್ರುವ ಕೇವಲ ಒಂದೇ ಒಂದು ಪ್ರಾಜೆಕ್ಟ್ ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯ ನಂದಕಿಶೋರ್ ನಿರ್ದೇಶನದ ಪೊಗರು ಸಿನಿಮಾದಲ್ಲಿ ನಟಿಸುತ್ತಿರುವ ಧ್ರುವಾ 5ನೇ ಪ್ರಾಜೆಕ್ಟ್ ಉದಯ್ ಮೆಹ್ತಾ ಅವರ ಜತೆ ಮಾಡಲಿದ್ದಾರೆ.ತಮ್ಮ ನಿರ್ಮಾಣದ ಸಿನಿಮಾದಲ್ಲಿ ಧ್ರುವ ಸರ್ಜಾ ಅಭಿನಯಸಲಿದ್ದಾರೆ ಎಂಬುದನ್ನು ಉದಯ್ ಮೆಹ್ತಾ ಸ್ಪಷ್ಟ ಪಡಿಸಿದ್ದಾರೆ. 2013 ರಿಂದ ನಾನು ಧ್ರುವ ಸರ್ಜಾ  ಡೇಟ್ಸ್ ಗಾಗಿ ಕಾಯುತ್ತಿದ್ದೇನೆ, ನಾನು ಬಚ್ಚನ್ ಸಿನಿಮಾ ಮಾಡುವಾಗಲೇ ಧ್ರುವ ಸರ್ಜಾ ಸಿನಿಮಾ ಮಾಡಬೇಕೆಂದು ಬಯಸಿದ್ದೆ, ಆದರೆ ಈಗ ನನಗೆ ಸಮಯ ಕೂಡಿ ಬಂದಿದೆ ಎಂದು ಉದಯ್ ಮೆಹ್ತಾ ಹೇಳಿದ್ದಾರೆ. 
ಮೊದಲ ಸಿನಿಮಾ ನಂತರ ಮೂರು ಚಿತ್ರಗಳಿಗೆ ಧ್ರುವ ಸರ್ಜಾ ಕಮಿಟ್ ಆಗಿದ್ದರು. ಹೀಗಾಗಿ ನನಗೆ ಡೇಟ್ಸ್ ಸಿಕ್ಕಿರಲಿಲ್ಲ, ಅವರ ಡೇಟ್ಸ್ ಗಾಗಿ ನಾನು ಕಾಯುತ್ತಿದ್ದೆ. 
ಅವರ ಜನಪ್ರಿಯತೆಯಿಂದಾಗಿ ಬಹು ದೊಡ್ಡ ಸ್ಟಾರ್ ಆಗಿದ್ದಾರೆ, ಜೊತೆಗೆ ಅವರು ಎಷ್ಟು ಹಣ ಕೇಳುತ್ತಾರೋ ಅಷ್ಟು ನೀಡಲು ನಿರ್ಮಾಪಕರು ಸಿದ್ದರಿದ್ದಾರೆ. ಅವರಿಗೆ ನಾನು ಎಷ್ಟು ಹಣ ನೀಡುತ್ತೇನೆ ಎಂಬುದು ಮುಖ್ಯವಲ್ಲ, ನೀಡುವ ಹಣಕ್ಕೆ ಅವರು ಅರ್ಹರಾಗಿದ್ದಾರೆ ಎಂದು ಉದಯ್ ಹೇಳಿದ್ದಾರೆ.
ಉದಯ್ ಮೆಹ್ತಾ ಅವರ ಜೊತೆ ಸಿನಿಮಾ ಮಾಡಲು ಧ್ರುವ ಸರ್ಜಾ ಒಪ್ಪಿದ್ದಾರೆ. ಭರ್ಜರಿ ಸಿನಿಮಾ ರಿಲೀಸ್ ಗು ಮುನ್ನ ಈ ಸಂಬಂಧ ಒಪ್ಪಿಗೆ ನೀಡಿದ್ದಾರೆ. ಧ್ರುವ ಸರ್ಜಾ ಪ್ರತಿಭೆ ಅವರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ತಿಳಿಸಿದ್ದಾರೆ.

ಧ್ರುವ ಸರ್ಜಾ ಕಾಲ್ ಶೀಟ್ ಗಾಗಿ 2013 ರಿಂದ ಕಾಯುತ್ತಿದ್ದೇನೆ: ಉದಯ್ ಮೆಹ್ತಾ ಧ್ರುವ ಸರ್ಜಾ ಕಾಲ್ ಶೀಟ್ ಗಾಗಿ 2013 ರಿಂದ ಕಾಯುತ್ತಿದ್ದೇನೆ: ಉದಯ್ ಮೆಹ್ತಾ Reviewed by VIVEKARAMA on ಅಕ್ಟೋಬರ್ 07, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.