'ಕರಿಯ 2' ಹಾಗೂ 'ಕಟಕ' ಪೈಪೋಟಿಯಲ್ಲಿ ಗೆಲ್ಲುವವರು ಯಾರು..?

ಈ ವಾರ ಕನ್ನಡದಲ್ಲಿ ಎರಡು ಸಿನಿಮಾಗಳು ಬಿಡುಗಡೆಯಾಗಲಿದೆ. ಒಂದು ಕಡೆ 'ಕರಿಯ 2' ಮತ್ತು ಇನ್ನೊಂದು ಕಡೆ 'ಕಟಕ' ಸಿನಿಮಾ ನಾಳೆ ರಾಜ್ಯಾದಂತ್ಯ ತೆರೆಗೆ ಬರುವುದಕ್ಕೆ ಸಜ್ಜಾಗಿವೆ.

'ಕರಿಯ 2' ಒಂದು ಪಕ್ಕಾ ಮಾಸ್ ಸಿನಿಮಾ ಆಗಿದೆ. ದರ್ಶನ್ ಅಭಿನಯದ 'ಕರಿಯ' ನಂತರ ಈಗ ಮತ್ತೆ ಅದೇ ಹೆಸರಿನಲ್ಲಿ ಸಿನಿಮಾ ಬರುತ್ತಿದ್ದು, ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಜೊತೆಗೆ 'ಕಟಕ' ಸಿನಿಮಾ ವಾಮಾಚಾರದ ಸುತ್ತ ನಡೆಯುವ ಕಥೆಯಾಗಿದ್ದು, ಇದೊಂದು ಹಾರರ್ ಚಿತ್ರವಾಗಿದೆ. ಅಂದಹಾಗೆ, ನಾಳೆ ಬಿಡುಗಡೆಯಾಗುತ್ತಿರುವ ಈ ಎರಡು ಸಿನಿಮಾಗಳು.

'ಕರಿಯ 2'
 'ಕರಿಯ 2' ಸಿನಿಮಾ ಅಕ್ಟೋಬರ್ 13ಕ್ಕೆ ಅಂದರೆ ನಾಳೆ ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ಕರಿಯನಾಗಿ 'ಗಣಪ' ಖ್ಯಾತಿಯ ನಟ ಸಂತೋಷ್ ಕಾಣಿಸಿಕೊಂಡಿದ್ದಾರೆ. ಮಯೂರಿ ಚಿತ್ರದ ನಾಯಕಿಯಾಗಿದ್ದಾರೆ. ಸಿನಿಮಾವನ್ನು ಪ್ರಭು ಶ್ರೀನಿವಾಸ್ ನಿರ್ದೇಶನ ಮಾಡಿದ್ದು, ದರ್ಶನ್ ಅವರ 'ಕರಿಯ' ಚಿತ್ರವನ್ನು ನಿರ್ಮಾಣ ಮಾಡಿದ್ದ ಆನೇಕಲ್ ಬಾಲರಾಜ್ ಅವರೇ ಈ ಚಿತ್ರಕ್ಕೂ ಹಣ ಹಾಕಿದ್ದಾರೆ.

'ಕಟಕ' 
'ಕಟಕ' ಸಿನಿಮಾ ನಾಳೆ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. 'ಉಗ್ರಂ' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ 'ಕಟಕ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವಾಮಾಚಾರದ ಸುತ್ತ ನಡೆಯುವ ಕಥೆ ಸಿನಿಮಾದಲ್ಲಿದ್ದು, ಇದೊಂದು ಹಾರರ್ ಚಿತ್ರವಾಗಿದೆ. ಐದು ವರ್ಷದ ಬಾಲಕಿ ಮೇಲೆ ವಾಮಾಚಾರ ಪ್ರಯೋಗವಾಗಿ ಮುಂದೆ ಅದು ಏನೆಲ್ಲ ಆಗುತ್ತದೆ ಎನ್ನುವುದು ಸಿನಿಮಾದ ಕಥೆ.ನಿಮ್ಮ ಆಯ್ಕೆ ಯಾವುದು..? 
ಈ ಎರಡು ಚಿತ್ರಗಳು ಪೈಕಿ ಈ ವಾರ ನೀವು ನೋಡಲು ಬಯಸಿದ ಸಿನಿಮಾ ಯಾವುದು..? ಎಂಬುದನ್ನು ಕಮೆಂಟ್ ಬಾಕ್ಸ್ ಮೂಲಕ ತಿಳಿಸಿ.


'ಕರಿಯ 2' ಹಾಗೂ 'ಕಟಕ' ಪೈಪೋಟಿಯಲ್ಲಿ ಗೆಲ್ಲುವವರು ಯಾರು..? 'ಕರಿಯ 2' ಹಾಗೂ 'ಕಟಕ' ಪೈಪೋಟಿಯಲ್ಲಿ ಗೆಲ್ಲುವವರು ಯಾರು..? Reviewed by VIVEKARAMA on ಅಕ್ಟೋಬರ್ 12, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.