ಅ.15 ರಿಂದ ಬಿಗ್ ಬಾಸ್ ಕನ್ನಡ ಸೀಸನ್ 5 ಅದ್ದೂರಿ ಪ್ರಾರಂಭ

ಕಲರ್ಸ್ ಸೂಪರ್ ಚಾನೆಲ್‌' ನಲ್ಲಿ ಇದೇ ಭಾನುವಾರದಿಂದ (ಅ.15) ಬಿಗ್ ಬಾಸ್ ಕನ್ನಡ ಸೀಸನ್ 5  ಅದ್ದೂರಿ ಪ್ರಾರಂಭ ಕಾಣಲಿದೆ. ಈ ವೇಳೆ  ಬಿಗ್ ಬಾಸ್ ರಿಯಾಲಿಟಿ ಶೋ ಕುರಿತು ವಿವರಿಸಲು ಪತ್ರಿಕಾಗೋಷ್ಠಿ ಕರೆದಿದ್ದ ಸುದೀಪ್ '"ಬಿಗ್‌ ಬಾಸ್‌ ಬಗ್ಗೆ ದಿನದಿಂದ ದಿನಕ್ಕೆ ಜನರಲ್ಲಿ ಆಸಕ್ತಿ ಹೆಚ್ಚುತ್ತಿದೆ, ಇದು ನನಗೆ ಖುಷಿ ಕೊಟ್ಟಿದೆ'" ಎಂದರು.


"ಸಾಮಾನ್ಯವಾಗಿ ಎಲ್ಲಾ ಟಿವಿ ಶೋ ಗಳು ವರ್ಷದಿಂದ ವರ್ಷಕ್ಕೆ ಆಕರ್ಷಣೆ ಕಳೆದುಕೊಳ್ಳುತ್ತಿವೆ. ಆದರೆ ಬಿಗ್ ಬಾಸ್ ಮಾತ್ರ ಪ್ರತಿ ಸೀಸನ್ ಗೆ ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ"  ಎಂದು ಕಿಚ್ಚ ಸುದೀಪ್ ಸಂತಸ ಹಂಚಿಕೊಂದರು.


ಬಿಗ್ ಬಾಸ್ ಗಾಗಿ ಈ ಬಾರಿ ಸಹ ಹೊಸ ಮನೆ ನಿರ್ಮಾಣ ಮಾಡಲಾಗಿದ್ದು  ಸುದೀಪ್ ಭಾನುವಾರ ಈ ಮನೆಯನ್ನು ವೀಕ್ಷಕರಿಗೆ ಪರಿಚಯಿಸಲಿದ್ದಾರೆ. ಈ ಬಾರಿ ಒಟ್ಟು 17  ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಲಿದ್ದು ಅವರಲ್ಲಿ  6 ಮಂದಿ ಸಾಮಾನ್ಯ ನಾಗರಿಕರೂ ಸೇರಿದ್ದಾರೆ.
ಅ.15 ರಿಂದ ಬಿಗ್ ಬಾಸ್ ಕನ್ನಡ ಸೀಸನ್ 5 ಅದ್ದೂರಿ ಪ್ರಾರಂಭ ಅ.15 ರಿಂದ ಬಿಗ್ ಬಾಸ್ ಕನ್ನಡ ಸೀಸನ್ 5 ಅದ್ದೂರಿ ಪ್ರಾರಂಭ Reviewed by VIVEKARAMA on ಅಕ್ಟೋಬರ್ 13, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.