12 ವರ್ಷಗಳ ನಂತರ ಮತ್ತೆ ತೆರೆಯ ಮೇಲೆ 'ಅಣ್ಣ-ತಂಗಿ' ಫೇವರಿಟ್ ಜೋಡಿ

ನಿರ್ದೇಶಕ ಸಾಯಿ ಪ್ರಕಾಶ್ ಮತ್ತು ಶಿವರಾಜ್ ಕುಮಾರ್ ಹಾಗೂ ರಾಧಿಕಾ ಕುಮಾರಸ್ವಾಮಿ ಕಾಂಬಿನೇಷನ್ ನಲ್ಲಿ 12 ವರ್ಷದ ನಂತರ ಮತ್ತೆ ಸಿನಿಮಾ ಮೂಡಿ ಬರುತ್ತಿದೆ.

ತವರಿಗೆ ಬಾ ತಂಗಿ, ಅಣ್ಣ ತಂಗಿ ನಂತರ ರಾಧಿಕಾ ಬ್ಯಾನರ್ ಅಡಿ, ಶಮಿಕಾ ಎಂಟರ್ ಪ್ರೈಸಸ್ ಪ್ರೊಡಕ್ಷನ್ ನಲ್ಲಿ  ಮತ್ತೆ ಸೂಪರ್ ಹಿಟ್ ಜೋಡಿಯಾದ ಶಿವಣ್ಣ- ರಾಧಿಕಾ ಅಣ್ಣ ತಂಗಿ ಪಾತ್ರದಲ್ಲಿ ನಟಿಸಲಿದ್ದಾರೆ. ಸಿನಿಮಾವನ್ನು ಸಾಯಿ ಪ್ರಕಾಶ್ ನಿರ್ದೇಶನ ಮಾಡಲಿದ್ದಾರೆ.
ಸದ್ಯ ರಾಧಿಕಾ ರವಿಚಂದ್ರನ್ ಅವರ ರಾಜೇಂದ್ರ ಪೊನ್ನಪ್ಪ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಅರ್ಜುನ್ ಸರ್ಜಾ ಅವರ ಸಿನಿಮಾದಲ್ಲೂ ರಾಧಿಕಾ ಅಭಿನಯಿಸುತ್ತಿದ್ದಾರೆ. ಸಾಯಿ ಪ್ರಕಾಶ್ ಕಥೆ ಹೆಣೆಯುತ್ತಿದ್ದಾರೆ, ಅಣ್ಣ-ತಂಗಿ ಬಾಂಧವ್ಯದ ಕಥೆ ಇದಾಗಿದ್ದು, ಇಂದಿನ ಟ್ರೆಂಡ್ ಗೆ ಅನುಗುಣವಾಗಿ ಚಿತ್ರಕಥೆ ತಯಾರಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ರಾಧಿಕಾ ಕುಮಾರಸ್ವಾಮಿ ಈ ಬಗ್ಗೆ ಅಧಿಕತ ಪ್ರಕಟಣೆ ಹೊರಡಿಸಬೇಕಿದೆ. ಸದ್ಯ ಶಿವರಾಜ್ ಕುಮಾರ್ ಬ್ಯಾಂಕಾಂಕ್ ನಲ್ಲಿ ವಿಲ್ಲನ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ, ಶಿವಣ್ಣ ಅಲ್ಲಿಂದ ವಾಪಸ್ ಬಂದ ಮೇಲೆ ಕಥೆಯ ಬಗ್ಗೆ ಅವರೊಂದಿಗೆ ಚರ್ಚಿಸಬೇಕಿದೆ. ಎಲ್ಲಾ ಅಂತಿಮಗೊಂಡ ನಂತರ, ತಮ್ಮ ಮುಂದಿನ ಪ್ರೊಡಕ್ಷನ್ ಬಗ್ಗೆ ತಿಳಿಸುವುದಾಗಿ ರಾಧಿಕಾ ಹೇಳಿದ್ದಾರೆ.
12 ವರ್ಷಗಳ ನಂತರ ಮತ್ತೆ ತೆರೆಯ ಮೇಲೆ 'ಅಣ್ಣ-ತಂಗಿ' ಫೇವರಿಟ್ ಜೋಡಿ 12 ವರ್ಷಗಳ ನಂತರ ಮತ್ತೆ ತೆರೆಯ ಮೇಲೆ 'ಅಣ್ಣ-ತಂಗಿ' ಫೇವರಿಟ್ ಜೋಡಿ Reviewed by VIVEKARAMA on ಅಕ್ಟೋಬರ್ 07, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.