ಮನೋರಂಜನ್ 'ವಿಐಪಿ' ಅಲ್ಲ, S/o ರವಿಚಂದ್ರನ್

ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ನಂದ ಕಿಶೋರ್ ನಿರ್ದೇಶನ ಮನೋರಂಜನ್ ಅಭಿನಯದ ವಿಐಪಿ ಸಿನಿಮಾ ಟೈಟಲ್ S/o ರವಿಚಂದ್ರನ್ ಎಂದು ಬದಲಾಯಿಸಲಾಗಿದೆ.

ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ನಂದ ಕಿಶೋರ್ ನಿರ್ದೇಶನ ಮನೋರಂಜನ್ ಅಭಿನಯದ ವಿಐಪಿ ಸಿನಿಮಾ ಟೈಟಲ್ S/o ರವಿಚಂದ್ರನ್ ಎಂದು ಬದಲಾಯಿಸಲಾಗಿದೆ.

ಈ ಸಿನಿಮಾದಲ್ಲಿ ರವಿಚಂದ್ರನ್ ನಟಿಸುತ್ತಿಲ್ಲ, ಸಾಯಿಕುಮಾರ್, ಮನೋರಂಜನ್ ತಂದೆಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇದು  ಪೂರ್ಣ ರಿಮೇಕ್ ಅಲ್ಲ, ಸ್ಥಳೀಯ ಸನ್ನಿವೇಶಕ್ಕೆ ಹೊಂದುವಂತೆ ಸಿನಿಮಾ ತಯಾರಿಸಲಾಗುತ್ತಿದೆ.  ಸಿನಿಮಾಗಾಗಿ ತಂತ್ರಜ್ಞರು, ಕಲಾವಿದರು ಸಮಾನವಾಗಿ ಶ್ರಮಪಡುತ್ತಿದ್ದಾರೆ. ಟೈಟಲ್ ಹೇಗೆ ಹೊಂದುತ್ತದೆ ಎಂಬುದು ಸಿನಿಮಾ ನೋಡಿದ ನಂತರ ವೀಕ್ಷಕರಿಗೆ ತಿಳಿಯಲಿದೆ.


ಸದ್ಯ ನಿರ್ದೇಶಕರು ಮತ್ತು ಚಿತ್ರ ತಂಡ ಮೈಸೂರಿನಲ್ಲಿದೆ, ನಾಯಕ-ನಾಯಕಿ ಮುಂದಿನ ದಿನಗಳಲ್ಲಿ ಮೈಸೂರಿಗೆ ಆಗಮಿಸಲಿದ್ದು ಹಾಡಿನ ಶೂಟಿಂಗ್ ನಡೆಯಲಿದೆ,  ಸಾಹೇಬ ನಂತರ S/o ರವಿಚಂದ್ರನ್ ಮನೋರಂಜನ್ 2ನೇ ಸಿನಿಮಾವಾಗಿದೆ, 
ಮಿಶ್ತಿ ಚಕ್ರಬೊರ್ತಿ ಈ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪಾದರ್ಪಾಣೆ ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಸುಭಾಷ್ ಘಾಯ್ ನಿರ್ದೇಶನದ ಕಾಂಚಿ ಚಿತ್ರದಲ್ಲಿ ನಟಿಸಿದ್ದಾರೆ. 

ಮನೋರಂಜನ್ ತಾಯಿಯಾಗಿ ಸಿತಾರ ನಟಿಸುತ್ತಿದ್ದಾರೆ, ಅವಿನಾಶ್, ಸಾಧು ಕೋಕಿಲಾ,  ಪ್ರಕಾಶ್ ಬೆಳವಾಡಿ, ಮುಂತಾದವರು ಅಭಿನಯಿಸಿದ್ದಾರೆ. ತಂದೆ-ಮಗನ ಬಾಂಧವ್ಯದ ಕಥೆಯುಲ್ಳ ಈ  ಸಿನಿಮಾವನ್ನು ದೀಪಾವಳಿಗೆ ರಿಲೀಸ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಅಕ್ಟೋಬರ್ ನಲ್ಲಿ ಆಡಿಯೋ ರಿಲೀಸ್ ಆಗಲಿದೆ.
ಮನೋರಂಜನ್ 'ವಿಐಪಿ' ಅಲ್ಲ, S/o ರವಿಚಂದ್ರನ್ ಮನೋರಂಜನ್ 'ವಿಐಪಿ' ಅಲ್ಲ, S/o ರವಿಚಂದ್ರನ್ Reviewed by VIVEKARAMA on ಸೆಪ್ಟೆಂಬರ್ 21, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.