ಪ್ರಥಮ್ ಬರಿ MLA ಮಾತ್ರವಲ್ಲ, 'ಮಂತ್ರಿ'ನೂ ಆಗೋದ್ರು.!

ಒಳ್ಳೆ ಹುಡುಗ ಪ್ರಥಮ್ MLA ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ, MLA ಪ್ರಥಮ್ ಅವರಿಗೆ ಪ್ರಮೋಷನ್ ಸಿಕ್ಕಿದೆ. ಅಂದ್ರೆ ಕ್ಯಾಬಿನೆಟ್ ಮಿನಿಸ್ಟರ್ ಆಗುವ ಅವಕಾಶ ಸಿಕ್ಕಿದ್ದು, ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.ಅಂದ್ಹಾಗೆ, ಇದೆಲ್ಲಾ ಸಾಧ್ಯವಾಗಿರುವುದು ಪ್ರಥಮ್ ಅಭಿನಯಿಸುತ್ತಿರುವ ಎಂ.ಎಲ್.ಎ ಚಿತ್ರದಲ್ಲಿ. ಹೌದು, ಎಂ.ಎಲ್.ಎ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ನಗರಾಭಿವೃದ್ಧಿ ಸಚಿವ ಪ್ರಥಮ್ ಅವರ ದೃಶ್ಯಗಳನ್ನ ಚಿತ್ರೀಕರಿಸಲಾಗುತ್ತಿದೆ.

ಟಿ.ವಿ. ಕಾರ್ಯಕ್ರಮ 'ಮಜಾ ಟಾಕೀಸ್'ಗೆ ಸಂಭಾಷಣೆ ಬರೆಯುತ್ತಿದ್ದ ಮೌರ್ಯ ಅವರು ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ
. ಮಂಗಳೂರಿನ ಬೆಡಗಿ ಸೋಹಲ್ ಮಂತೆರೋ ಈ ಚಿತ್ರದಲ್ಲಿ ಪ್ರಥಮ್ ಜತೆ ನಾಯಕಿಯಾಗಿದ್ದಾರೆ. ಚಿತ್ರದ ಟೈಟಲ್ ಹೇಳುವಂತೆ ಇದೊಂದು ರಾಜಕೀಯದ ಸುತ್ತು ಸುತ್ತುವ ಕಥೆಯಾಗಿದ್ದು, ಮೊದಲ ಭಾಗದಲ್ಲಿ ಅಸಾಮಾನ್ಯ ಚಿಂತನೆ ಇರುವ ಸಾಮಾನ್ಯ ಹುಡುಗನಿಗೆ ಅಚಾನಕ್ ಆಗಿ ಎಂ.ಎಲ್‌.ಎ ಆಗುವ ಅವಕಾಶ ಸಿಗುತ್ತೆ.
ಆಮೇಲೆ ಏನಾಗುತ್ತೆ ಎಂಬುದು ಚಿತ್ರಕಥೆ ಅಂತೆ.
ಪ್ರಥಮ್ ಬರಿ MLA ಮಾತ್ರವಲ್ಲ, 'ಮಂತ್ರಿ'ನೂ ಆಗೋದ್ರು.! ಪ್ರಥಮ್ ಬರಿ MLA ಮಾತ್ರವಲ್ಲ, 'ಮಂತ್ರಿ'ನೂ ಆಗೋದ್ರು.! Reviewed by VIVEKARAMA on ಸೆಪ್ಟೆಂಬರ್ 14, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.