ಸುದೀಪ್-ಚಿರಂಜೀವಿ' ಜೋಡಿಯಿಂದ ಕನ್ನಡದಲ್ಲೊಂದು ಚಿತ್ರ.!

ತೆಲುಗು ಮೆಗಾಸ್ಟಾರ್ ಚಿರಂಜೀವಿ ಮತ್ತು ಕನ್ನಡದ ಕಿಚ್ಚ ಸುದೀಪ್ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಚಿರಂಜೀವಿಯ ಅವರ 151ನೇ ಚಿತ್ರ 'ಉಯ್ಯಾಲವಾಡ ನರಸಿಂಹ ರೆಡ್ಡಿ' ಚಿತ್ರದಲ್ಲಿ ಸುದೀಪ್ ಪಾಳೆಗಾರನ ಪಾತ್ರವನ್ನ ನಿರ್ವಹಿಸಲಿದ್ದಾರೆ ಎನ್ನಲಾಗಿದೆ.

ಈ ಮೂಲಕ ಚೊಚ್ಚಲ ಬಾರಿಗೆ ಚಿರಂಜೀವಿ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಸುದೀಪ್. ಈ ಸುದ್ದಿ ಇನ್ನು ಅಧಿಕೃತವಾಗಿಲ್ಲ. ಸುದೀಪ್ ಚಿತ್ರೀಕರಣದಲ್ಲೂ ಭಾಗಿಯಾಗಿಲ್ಲ. ಹೀಗಿರುವಾಗ ಇನ್ನೊಂದು ಚಿತ್ರದಲ್ಲಿ ಚಿರು ಮತ್ತು ಸುದೀಪ್ ಒಂದಾಗಲಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ. ಈ ವಿಶೇಷ ಅಂದ್ರೆ ಇದು ಕನ್ನಡ ಸಿನಿಮಾವಂತೆ.


ಕನ್ನಡ ಚಿತ್ರಕ್ಕಾಗಿ ಒಂದಾಗ್ತಾರೆ ಚಿರು-ಕಿಚ್ಚ


ಚಿರಂಜೀವಿ ಅವರ 'ಉಯ್ಯಾಲವಾಡ ನರಸಿಂಹ ರೆಡ್ಡಿ' ಚಿತ್ರದ ನಂತರ ಮೆಗಾಸ್ಟಾರ್ ಜೊತೆ ಸುದೀಪ್ ಎರಡನೇ ಸಿನಿಮಾ ಮಾಡಲಿದ್ದಾರಂತೆ. ಈ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ತಯಾರಾಗಲಿದೆ ಎನ್ನುವುದು ಸ್ಯಾಂಡಲ್ ವುಡ್ ಗೆ ಸಿಹಿ ಸುದ್ದಿ.


ಇಬ್ಬರು ಹೀರೋಗಳು

ಅಂದ್ಹಾಗೆ, ಚಿರು 151ನೇ ಚಿತ್ರದಲ್ಲಿ ಸುದೀಪ್ ಪಾಳೇಗಾರನಾಗಿ ವಿಶೇಷ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಆದ್ರೆ, ಮುಂದಿನ ಚಿತ್ರದಲ್ಲಿ ಇಬ್ಬರು ಹೀರೋಗಳಾಗಿ ಮಿಂಚಲಿದ್ದಾರಂತೆ.

ನಿರ್ದೇಶಕ-ನಿರ್ಮಾಪಕ ಯಾರು

ಈ ಚಿತ್ರಕ್ಕೆ ನಿರ್ದೇಶನ ಯಾರು ಮಾಡಲಿದ್ದಾರೆ ಎಂಬುದನ್ನ ಗೌಪ್ಯವಾಗಿಡಲಾಗಿದೆ. ಆದ್ರೆ, ಈ ಚಿತ್ರಕ್ಕೆ ಆಂಧ್ರದಲ್ಲಿ ಕನ್ನಡ ಸಿನಿಮಾಗಳನ್ನ ವಿತರಣೆ ಮಾಡುತ್ತಿರುವ ಸುದೀಪ್ ಆಪ್ತರೊಬ್ಬರು ಬಂಡವಾಳ ಹಾಕಲಿದ್ದಾರೆ. ಈ ಹಿಂದೆ ಸುದೀಪ್ ಅಭಿನಯದ 'ಸ್ಪರ್ಶಾ', 'ಧಮ್' ಹಾಗೂ ಇತ್ತೀಚಿನ 'ದಂಡುಪಾಳ್ಯ-2' ಚಿತ್ರವನ್ನ ಕೂಡ ವಿತರಣೆ ಮಾಡಿದ್ದಾರೆ


'ಸಿಪಾಯಿ' ಆಗಿದ್ದ ಚಿರಂಜೀವಿ

ಈ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಿದ್ದ 'ಸಿಪಾಯಿ' ಚಿತ್ರದ ಮೂಲಕ ಚಿರಂಜೀವಿ ಕನ್ನಡಕ್ಕೆ ಪರಿಚಯವಾಗಿದ್ದರು. ಬಹುಭಾಷೆಯಲ್ಲಿ ನಿರ್ಮಾಣವಾಗಿದ್ದ 'ಶ್ರೀಮಂಜುನಾಥ' ಚಿತ್ರದಲ್ಲಿ ಶಿವನ ಪಾತ್ರ ನಿರ್ವಹಿಸಿದ್ದರು. ಈಗ ಸುದೀಪ್ ಸಿನಿಮಾದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಪ್ರವೇಶ ಮಾಡಲಿದ್ದಾರಂತೆ.



ಸುದೀಪ್-ಚಿರಂಜೀವಿ' ಜೋಡಿಯಿಂದ ಕನ್ನಡದಲ್ಲೊಂದು ಚಿತ್ರ.! ಸುದೀಪ್-ಚಿರಂಜೀವಿ' ಜೋಡಿಯಿಂದ ಕನ್ನಡದಲ್ಲೊಂದು ಚಿತ್ರ.! Reviewed by VIVEKARAMA on ಸೆಪ್ಟೆಂಬರ್ 26, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.