'ರಾಜಸಿಂಹ'ನ ಅವತಾರದಲ್ಲಿ ಮತ್ತೆ ಬಂದ ವಿಷ್ಣುದಾದ

ಡಾ. ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬದ ವಿಶೇಷವಾಗಿ ನಟ ಅನಿರುದ್ಧ್ ಅಭಿನಯದ "ರಾಜಾ ಸಿಂಹ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಜಯನಗರದಲ್ಲಿರುವ ವಿಷ್ಣು ಅವರ ಮನೆಯಲ್ಲಿ ಭಾರತಿ ವಿಷ್ಣುವರ್ಧನ್‌ ಟೀಸರ್ ಬಿಡುಗಡೆ ಮಾಡಿದ್ರು.


 'ರಾಜಾಸಿಂಹ' ಚಿತ್ರವು "ಸಿಂಹಾದ್ರಿಯ ಸಿಂಹ' ಚಿತ್ರದ ಮುಂದುವರೆದ ಭಾಗವಾಗಿದ್ದು, ಇದರಲ್ಲಿ ವಿಷ್ಣುವರ್ಧನ್‌ ಅವರ ಪಾತ್ರವೂ ಇರುತ್ತದಂತೆ. "ಸಿಂಹಾದ್ರಿಯ ಸಿಂಹ' ಚಿತ್ರದಲ್ಲಿನ ವಿಷ್ಣುವರ್ಧನ್‌ ಅವರ ಸ್ಟಾಕ್‌ ಶಾಟ್ ಗಳನ್ನು ಬಳಸಿಕೊಳ್ಳುವುದರ ಜೊತೆಗೆ, ಗ್ರಾಫಿಕ್ಸ್‌ ಮೂಲಕ ಅವರನ್ನು ಮತ್ತೂಮ್ಮೆ ಸೃಷ್ಠಿಸಲಾಗುತ್ತಿರುವುದು ಈ ಚಿತ್ರದ ವಿಶೇಷ.

'ರಾಜ ಸಿಂಹ' ಚಿತ್ರವನ್ನು ಸಿ.ಡಿ.ಬಸಪ್ಪ ನಿರ್ಮಿಸುತ್ತಿದ್ದು, ನವ ನಿರ್ದೇಶಕ ರವಿರಾಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 
ನಾಯಕ ಅನಿರುದ್ಧ್ ಗೆ ನಿಖಿತಾ ತುಕ್ರಾಲ್ ನಾಯಕಿಯಾಗಿ ನಟಿಸಿದ್ದು, 
ಭಾರತಿ ವಿಷ್ಣುವರ್ಧನ್‌, ಸಂಜನಾ ಗಲ್ರಾನಿ, ಶರತ್ ಲೋಹಿತಾಶ್ವ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಇನ್ನು ವಿಶೇಷ ಪಾತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಕೂಡ ಕಾಣಿಸಿಕೊಂಡಿದ್ದಾರೆ.'ರಾಜಸಿಂಹ'ನ ಅವತಾರದಲ್ಲಿ ಮತ್ತೆ ಬಂದ ವಿಷ್ಣುದಾದ 'ರಾಜಸಿಂಹ'ನ ಅವತಾರದಲ್ಲಿ ಮತ್ತೆ ಬಂದ ವಿಷ್ಣುದಾದ Reviewed by VIVEKARAMA on ಸೆಪ್ಟೆಂಬರ್ 19, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.