ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಮದುವೆ ಅಂತೆ: ಹುಡುಗ ಹೇಗಿರಬೇಕು!!

ನಟಿ ರಾಧಿಕಾ ಪಂಡಿತ್, ನಟಿ ರಮ್ಯಾ ಬಾರ್ನಾ, ನಟಿ ಸಿಂಧು ಲೋಕನಾಥ್ ಈಗಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಯ್ತು. ಇವರ ಸಾಲಿಗೆ ನಟಿ ರಚಿತಾ ರಾಮ್ ಕೂಡ ಸೇರ್ತಾರೆ ಎಂಬುದೇ ಸದ್ಯದ ಮಾತು!!

ಮದುವೆ ಪ್ಲಾನ್ ನಲ್ಲಿದ್ದಾರಾ ರಚಿತಾ.?

ಉಪ್ಪಿ-ರುಪಿ', 'ಅಯೋಗ್ಯ' ಸೇರಿದಂತೆ ಸಿನಿಮಾಗಳಲ್ಲಿಯೇ ಬಿಜಿಯಾಗಿರುವ ನಟಿ ರಚಿತಾ ರಾಮ್ ಮದುವೆ ಬಗ್ಗೆ ಯಾವುದೇ ಪ್ಲಾನ್ ಮಾಡಿಲ್ಲ. ಆದ್ರೆ, 'ಒಳ್ಳೆಯ ಹುಡುಗ ಸಿಕ್ಕರೆ ತಕ್ಷಣ ಮದುವೆ ಆಗುವೆ' ಎಂದು ಹೇಳಲು ರಚಿತಾ ರಾಮ್ ಮರೆಯೋಲ್ಲ.

''ದಯವಿಟ್ಟು ಇಷ್ಟು ಬೇಗ ಮದುವೆ ಆಗಬೇಡಿ ಅಂತ ಎಲ್ಲರೂ ಹೇಳುತ್ತಿದ್ದಾರೆ. ಆದ್ರೆ ಮದುವೆ ಅನ್ನೋದು ನಮ್ಮ ಕೈಯಲ್ಲಿ ಇಲ್ಲ. ಅದು ಯಾವಾಗ ಆಗಬೇಕೋ, ಅಗ ಆಗುತ್ತೆ. ಒಳ್ಳೆ ಹುಡುಗ ಸಿಕ್ಕರೆ ಖಂಡಿತ ಆಗುವೆ'' ಎನ್ನುತ್ತಾರೆ ನಟಿ ರಚಿತಾ ರಾಮ್.


ಸಂಪ್ರದಾಯಸ್ಥ ಹಾಗೂ ತುಂಬು ಕುಟುಂಬದ ಹುಡುಗ ಬೇಕಂತೆ ನಟಿ ರಚಿತಾ ರಾಮ್ ಗೆ.!

ತುಂಬು ಮನೆಯ ಸೊಸೆ ಆಗಬೇಕು.!
 ''ಸಂಪ್ರದಾಯಸ್ಥ ಮನೆಯ ಹುಡುಗ ಬೇಕು. ಜಾಯಿಂಟ್ ಫ್ಯಾಮಿಲಿ ಇರಬೇಕು. ತುಂಬು ಮನೆಯ ಸೊಸೆ ಆಗಿ ಹೋಗಬೇಕು'' ಅಂತಾರೆ ನಟಿ ರಚಿತಾ ರಾಮ್.

''ಮದುವೆ ಆದ್ಮೇಲೆ ಸಿನಿಮಾ ಮಾಡುವುದಿಲ್ಲ. ಸಿನಿಮಾದಲ್ಲಿ ಮುಂದುವರಿಯುವಂತೆ ಹುಡುಗ ಹೇಳಿದರೂ, ನಾನು ಮಾಡಲ್ಲ. ಫ್ಯಾಮಿಲಿ ಜೊತೆ ಖುಷಿಯಾಗಿರಬೇಕು ಎಂಬುದೇ ನನ್ನ ಆಸೆ'' ಎನ್ನುತ್ತಾರೆ ರಚಿತಾ ರಾಮ್.
ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಮದುವೆ ಅಂತೆ: ಹುಡುಗ ಹೇಗಿರಬೇಕು!! ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಮದುವೆ ಅಂತೆ: ಹುಡುಗ ಹೇಗಿರಬೇಕು!! Reviewed by VIVEKARAMA on ಸೆಪ್ಟೆಂಬರ್ 29, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.