ತೆರೆಯ ಮೇಲೆ ಚದುರಂಗ ಆಡಲಿರುವ ಲೂಸಿಯಾ ಪವನ್ ಕುಮಾರ್

ಲೂಸಿಯಾ ಮತ್ತು ಯೂಟರ್ನ್ ಚಿತ್ರ ಖ್ಯಾತಿಯ ಪವನ್ ಕುಮಾರ್ ಇದೀಗ ಬೆಳ್ಳಿ ಪರದೇ ಮೇಲೆ ಚದುರಂಗದಾಟ ಆಡಲಿದ್ದಾರೆ.

ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗುವ ಎಲ್ಲಾ ಅರ್ಹತೆ ನನ್ನಲ್ಲಿದೆ ಎಂದು ಹೇಳಿದ್ದ ಯುವ ಆಟಗಾರ ಜೀವನ ಕುರಿತಾದ ಚಿತ್ರವನ್ನು ತೆರೆಯ ಮೇಲೆ ತರಲು ಪವನ್ ಮುಂದಾಗಿದ್ದಾರೆ. ಪವನ್ ಚಿತ್ರವನ್ನೇ ಅಲ್ಲ ಇದರ ಜತೆಗೆ ಆ ಆಟಗಾರನ ಏಳಿಗೆಗೆ ಅಗತ್ಯವಿರುವ ಪ್ರಾಯೋಜಕತ್ವಕ್ಕೂ ಸಹಾಯ ಮಾಡುತ್ತಿದ್ದಾರೆ. 


ಯುವ ಚೆಸ್ ಆಟಗಾರನ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಚೆಸ್ ಆಟಗಾರನ ಪ್ರಾಯೋಜಕತ್ವಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಪವನ್ ಪೋಸ್ಟ್ ವೊಂದನ್ನು ಹಾಕಿದ್ದರು. ಅದರಂತೆ ಕೆಲ ಪ್ರಾಯೋಜಕರು ಮುಂದೆ ಬಂದಿದ್ದಾರೆ. 

ಇದೇ ಅಂಶಗಳನ್ನು ಒಳಗೊಂಡ ಚಿತ್ರಕಥೆಯನ್ನು ಪವನ್ ಕುಮಾರ್ ರೆಡಿ ಮಾಡುತ್ತಿದ್ದಾರೆ. ಯುವ ಚೆಸ್ ಆಟಗಾರನ ಜೀವನ ಕುರಿತಾದ ಏಳು ಬೀಳುಗಳನ್ನು ಸ್ಕ್ರೀಪ್ಟ್ ಮಾಡಲು ಒಂದು ತಂಡವನ್ನು ಪವನ್ ರೆಡಿ ಮಾಡಿದ್ದಾರೆ. ಇನ್ನು ಯುವ ಚೆಸ್ ಆಟಗಾರ ಗ್ರ್ಯಾಂಡ್ ಮಾಸ್ಟರ್ ಆದ ಮೇಲೆ ಇದನ್ನು ತೆರೆಯ ಮೇಲೆ ತರಲು ಪವನ್ ಯೋಜಿಸುತ್ತಿದ್ದಾರೆ.
ತೆರೆಯ ಮೇಲೆ ಚದುರಂಗ ಆಡಲಿರುವ ಲೂಸಿಯಾ ಪವನ್ ಕುಮಾರ್ ತೆರೆಯ ಮೇಲೆ ಚದುರಂಗ ಆಡಲಿರುವ ಲೂಸಿಯಾ ಪವನ್ ಕುಮಾರ್ Reviewed by VIVEKARAMA on ಸೆಪ್ಟೆಂಬರ್ 21, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.