ಪಾರೂಲ್ ಸಿನಿಮಾ ಹೆಸರು 'ಪಾತರಗಿತ್ತಿ' ಅಲ್ಲ, ಅದು 'ಬಟರ್ ಫ್ಲೈ'

ರಮೇಶ್ ಅರವಿಂದ್ ನಿರ್ದೇಶನದ 'ಬಟರ್ ಫ್ಲೈ' ಚಿತ್ರದ ಚಿತ್ರೀಕರಣ ಶುರುವಾಗಿದೆ. ಚಿತ್ರದ ಶೂಟಿಂಗ್ ನಲ್ಲಿ ಚಿತ್ರತಂಡ ಭಾಗಿಯಾಗಿದ್ದು, ಚಿತ್ರದ ಕೆಲ ಮೇಕಿಂಗ್ ಸ್ಟಿಲ್ ಗಳು ಈಗ ಹೊರಬಂದಿದೆ.ಪಾರೂಲ್ ಯಾದವ್ ಚಿತ್ರದ ನಾಯಕಿಯಾಗಿದ್ದು, ಚಿತ್ರೀಕರಣದಲ್ಲಿ ಅವರು ಭಾಗಿಯಾಗಿದ್ದಾರೆ. ಚಿತ್ರವನ್ನು ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದು, ಸತ್ಯ ಹೆಗಡೆ ಕ್ಯಾಮರಾ ಕೆಲಸದಲ್ಲಿ ತಲ್ಲೀನರಾಗಿದ್ದರು. ಕೈಗೆ ಮದರಂಗಿ ಹಾಕಿ ಸಿಂಪಲ್ ಹುಡುಗಿಯಾಗಿ ಪಾರೂಲ್ ಕಾಣಿಸಿಕೊಂಡಿದ್ದರು.ಬಾಲಿವುಡ್ ಸೂಪರ್ ಹಿಟ್ ಚಿತ್ರ 'ಕ್ವೀನ್' ಕನ್ನಡಕ್ಕೆ ರೀಮೇಕ್ ಆಗುತ್ತಿದ್ದು, ಇದೀಗ, ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಸಖತ್ ಕಲರ್ ಫುಲ್ ಆಗಿದೆ.

ಕನ್ನಡದಲ್ಲಿ 'ಕ್ವೀನ್' ಆಗಿ ನಟಿ ಪಾರುಲ್ ಯಾದವ್ ಕಾಣಿಸಿಕೊಳ್ಳುತ್ತಿದ್ದು, ನಟಿ ಆಮಿ ಜಾಕ್ಸನ್ ಕೂಡ 'ಬಟರ್ ಫ್ಲೈ' ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರವನ್ನ ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಡೈರೆಕ್ಟ್ ಮಾಡುತ್ತಿದ್ದಾರೆ.

ಪಾರೂಲ್ ಸಿನಿಮಾ ಹೆಸರು 'ಪಾತರಗಿತ್ತಿ' ಅಲ್ಲ, ಅದು 'ಬಟರ್ ಫ್ಲೈ'  ಪಾರೂಲ್ ಸಿನಿಮಾ ಹೆಸರು 'ಪಾತರಗಿತ್ತಿ' ಅಲ್ಲ, ಅದು 'ಬಟರ್ ಫ್ಲೈ' Reviewed by VIVEKARAMA on ಸೆಪ್ಟೆಂಬರ್ 28, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.