ರವಿಚಂದ್ರನ್ ಪುತ್ರನ ಜೊತೆ ಕಮಲ್ ಹಾಸನ್ ಪುತ್ರಿ ನಟಿಸುವುದು ಡೌಟು.

ನಾಗಶೇಖರ್ ನಿರ್ದೇಶನವಿರುವ 'ನಾನು ಅವಳು' ಚಿತ್ರದಲ್ಲಿ ವಿಕ್ರಮ್ ಗೆ 'ಸಕಲಕಲಾವಲ್ಲಭ' ಕಮಲ್ ಹಾಸನ್ ಎರಡನೇ ಪುತ್ರಿ ಅಕ್ಷರಾ ಹಾಸನ್ ನಾಯಕಿ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ವಿಕ್ರಮ್ ಚಿತ್ರಕ್ಕೆ ಅಕ್ಷರಾ ಹಾಸನ್ ಬಣ್ಣ ಹಚ್ಚುವುದು ಡೌಟು. ಹೀಗಾಗಿ ಬೇರೆ ನಾಯಕಿಯ ಹುಡುಕಾಟದಲ್ಲಿ ನಾಗಶೇಖರ್ ತೊಡಗಿದ್ದಾರೆ.

'ನಾನು ಅವಳು' ಚಿತ್ರಕ್ಕೆ ಮಲಯಾಳಂನ ಸಾಯಿ ಪಲ್ಲವಿ ನಾಯಕಿ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.


ಮಲಯಾಳಂನ 'ಪ್ರೇಮಂ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಸಾಯಿ ಪಲ್ಲವಿ, ಹರೆಯದ ಹುಡುಗರ ಅಚ್ಚುಮೆಚ್ಚಿನ ನಟಿ. ಮಾಲಿವುಡ್ ನಲ್ಲಿ ಸಖತ್ ಬಿಜಿ ಆಗಿರುವ ಸಾಯಿ ಪಲ್ಲವಿ ಇದೀಗ 'ನಾನು ಅವಳು' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಡುವ ಸಾಧ್ಯತೆ ಇದೆ.
ರವಿಚಂದ್ರನ್ ಪುತ್ರನ ಜೊತೆ ಕಮಲ್ ಹಾಸನ್ ಪುತ್ರಿ ನಟಿಸುವುದು ಡೌಟು. ರವಿಚಂದ್ರನ್ ಪುತ್ರನ ಜೊತೆ ಕಮಲ್ ಹಾಸನ್ ಪುತ್ರಿ ನಟಿಸುವುದು ಡೌಟು. Reviewed by VIVEKARAMA on ಸೆಪ್ಟೆಂಬರ್ 27, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.