ಪೈಲ್ವಾನ್ ಕಿಚ್ಚನ ಹೊಸ ಕಥೆ





ಪೈಲ್ವಾನ್, ಸುದೀಪ್ ಅಭಿನಯದ ಈ ಚಿತ್ರ ಶೂಟಿಂಗ್ ಶುರುವಾಗುವ ಮುನ್ನವೇ ಭಾರಿ ನಿರೀಕ್ಷೆ ಹುಟ್ಟಿಸಿದೆ. ಆದರೆ, ಚಿತ್ರಕ್ಕೆ ಇನ್ನೂ ನಾಯಕಿ ಆಯ್ಕೆಯಾಗಿಲ್ಲ. ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ತುಂಬಾನೇ ಸ್ಕೋಪ್ ಇದೆ. ಸಾಮಾನ್ಯವಾಗಿ ಸ್ಟಾರ್ ನಟರ ಚಿತ್ರಗಳಲ್ಲಿ ನಾಯಕಿಯ ಪಾತ್ರಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇರಲ್ಲ. ಆದರೆ, ಪೈಲ್ವಾನ್ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ತುಂಬಾನೇ ಮಹತ್ವವಿದೆ. ಹೀಗಾಗಿ ನಾಯಕಿಯ ಆಯ್ಕೆ ನಿಧಾನವಾಗುತ್ತಿದೆ. ಕೆಲವರನ್ನು ಸಂಪರ್ಕಿಸಿದ್ದೇವೆ. ಇನ್ನೂ ಪೈನಲ್ ಆಗಿಲ್ಲ ಎಂದಿದ್ದಾರೆ ನಿರ್ದೇಶಕ ಕೃಷ್ಣ.
ಸುದೀಪ್ ಅವರಿಗೆ ಪೈಲ್ವಾನ್ ಆಗಿ ರೂಪುಗೊಳ್ಳಲು ತರಬೇತಿ ಕೂಡಾ ನೀಡಲಾಗುವುದಂತೆ. ಅದಕ್ಕಾಗಿ ಎರಡು ಕ್ರೀಡಾ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆಯಂತೆ. ಪೈಲ್ವಾನ್ ಚಿತ್ರಕ್ಕೆ ಸುದೀಪ್ ಪೈಲ್ವಾನ್ ತರಬೇತಿ ಪಡೆದುಕೊಂಡೇ ಬಣ್ಣ ಹಚ್ಚಲಿದ್ದಾರೆ ಕಿಚ್ಚ.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಕರುಣಾಕರ್ ಕ್ಯಾಮೆರಾ ಕೆಲಸ ಮಾಡಲಿದ್ದಾರೆ. ಹೆಬ್ಬುಲಿಯಲ್ಲಿ ಅದ್ಭುತ ಸಾಹಸ ಸಂಯೋಜಿಸಿದ್ದ ರವಿವರ್ಮ, ಪೈಲ್ವಾನ್‍ಗೆ ಸಾಹಸ ನಿರ್ದೇಶಕ. ಕೆಲವು ಬಾಕ್ಸಿಂಗ್ ಹಾಗೂ ಕ್ಲೈಮಾಕ್ಸ್ ದೃಶ್ಯಗಳ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ. ಎಲ್ಲ ತಯಾರಿಯೂ ಮುಗಿದರೆ, ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರೀಕರಣ ಶುರುವಾಗಲಿದೆ.
ಪೈಲ್ವಾನ್ ಕಿಚ್ಚನ ಹೊಸ ಕಥೆ ಪೈಲ್ವಾನ್ ಕಿಚ್ಚನ ಹೊಸ ಕಥೆ Reviewed by VIVEKARAMA on ಸೆಪ್ಟೆಂಬರ್ 22, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.