ಅರ್ಜುನ್ ಸರ್ಜಾ ಮಗಳ ಚಿತ್ರಕ್ಕೆ ದರ್ಶನ್ ಸಾಥ್

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮಗಳು ಅಭಿನಯದ 'ಪ್ರೇಮಬರಹ' ಚಿತ್ರ ಕಂಪ್ಲೀಟ್ ಆಗಿದ್ದು, ಬಿಡುಗಡೆಗೆ ಎಲ್ಲ ಸಿದ್ದತೆ ಮಾಡಿಕೊಳ್ಳುತ್ತಿದೆ. ದೀಪಾವಳಿ ಹಬ್ಬದ ಪ್ರಯುಕ್ತ ತೆರೆಮೇಲೆ ಅಪ್ಪಳಿಸಲಿರುವ 'ಪ್ರೇಮಬರಹ'ಕ್ಕೆ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ಕೊಡ್ತಿದ್ದಾರೆ. 'ಪ್ರೇಮ ಬರಹ' ಚಿತ್ರ ಅರ್ಜುನ್ ಸರ್ಜಾ ಮಗಳು ಕನ್ನಡದಲ್ಲಿ ಅಭಿನಯಿಸುತ್ತಿರುವ ಚೊಚ್ಚಲ ಸಿನಿಮಾ.

 ನಟ ಚಂದನ್ ಈ ಚಿತ್ರದ ನಾಯಕ. ಈ ಚಿತ್ರವನ್ನ ಸ್ವತಃ ಅರ್ಜುನ್ ಸರ್ಜಾ ಅವರೇ ನಿರ್ಮಾಣ ಮಾಡಿ, ನಿರ್ದೇಶನ ಕೂಡ ಮಾಡಿದ್ದಾರೆ.


ಇಂದು ಸಂಜೆ 5 ಗಂಟೆಗೆ (ಸೆಪ್ಟಂಬರ್ 18) 5 ಗಂಟೆಗೆ 'ಪ್ರೇಮ ಬರಹ' ಚಿತ್ರದ ಮೊದಲ ಹಾಡು ರಿಲೀಸ್ ಆಗಲಿದೆ. ಒಂದೇ ಸಮಯದಲ್ಲಿ ತಮಿಳು ಮತ್ತು ಕನ್ನಡದಲ್ಲಿ ಈ ಹಾಡು ಬಿಡುಗಡೆಯಾಗಲಿದೆ.

ಪ್ರೇಮ ಬರಹ' ಚಿತ್ರದ  ಜೆಸ್ಸಿಗಿಫ್ಟ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಸಾಧು ಕೋಕಿಲಾ, ಸುಹಾಸಿನಿ, ರಂಗಾಯಣ ರಘು ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಥೆ, ಚಿತ್ರಕಥೆ ಬರೆದು, ನಿರ್ದೇಶನ ಹಾಗೂ ನಿರ್ಮಾಣ ಕೂಡ ಅರ್ಜುನ್ ಸರ್ಜಾ ಅವರೇ ಮಾಡಿದ್ದಾರೆ.

ಅರ್ಜುನ್ ಸರ್ಜಾ ಮಗಳ ಚಿತ್ರಕ್ಕೆ ದರ್ಶನ್ ಸಾಥ್ ಅರ್ಜುನ್ ಸರ್ಜಾ ಮಗಳ ಚಿತ್ರಕ್ಕೆ ದರ್ಶನ್ ಸಾಥ್ Reviewed by VIVEKARAMA on ಸೆಪ್ಟೆಂಬರ್ 18, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.