ದರ್ಶನ್ 'ಕುರುಕ್ಷೇತ್ರ'ದಲ್ಲಿ ದುರ್ಯೋಧನನ ಪತ್ನಿ ಭಾನುಮತಿಯಾಗಿ ರೆಮ್ಯಾ ನಂಬೀಸನ್:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಚಿತ್ರ ಕುರುಕ್ಷೇತ್ರ ಅಕ್ಟೋಬರ್ 6ರಂದು ಸೆಟ್ಟೇರುತ್ತಿದೆ. ನಟ ದರ್ಶನ್, ಅರ್ಜುನ್ ಸರ್ಜಾ, ರವಿಚಂದ್ರನ್, ಅಂಬರೀಷ್, ಸೋನು ಸೂದ್, ಡ್ಯಾನಿಶ್ ಅಖ್ತರ್ ಸೈಫಿ, ನಿಖಿಲ್ ಕುಮಾರ್ ಸೇರಿದಂತೆ ಹಲವು ಕಲಾವಿದರುಅಭಿನಯಿಸಲಿದ್ದಾರೆ.

ಇತ್ತೀಚಿನ ಬೆಳವಣಿಗೆಯೆಂದರೇ ಕುರುಕ್ಷೇತ್ರದಲ್ಲಿ ದುರ್ಯೋಧನನ ಪತ್ನಿ ಭಾನುಮತಿ ಪಾತ್ರದಲ್ಲಿ ರೆಮ್ಯಾ ನಂಬೀಸನ್ ನಟಿಸಲಿದ್ದಾರೆ.

ರೆಜಿನಾ ಕಾಸ್ಸಂದ್ರ ಬದಲು ರೆಮ್ಯಾ ಬಂದಿದ್ದಾರೆ, ಅಕ್ಟೋಬರ್ ನಿಂದ ರೆಮ್ಯಾ ಸೆಟ್ ಗೆ ಬರಲಿದ್ದಾರೆ, ರೆಮ್ಯಾ ನಂಬೀಸನ್ ಕನ್ನಡದಲ್ಲಿ 2ನೇ ಸಿನಿಮಾವಾಗಿದೆ.

ಸಿನಿಮಾವನ್ನು ನಾಗಣ್ಣ ನಿರ್ದೇಶಿಸುತ್ತಿದ್ದು, ಮುನಿರತ್ನ ನಿರ್ಮಾಪಕರಾಗಿದ್ದಾರೆ, ಆದರೆ ಸಿನಿಮಾ ಚಿತ್ರೀಕರಣ ಸರಾಗಾವಾಗಿ ನಡೆಯಲೆಂಬ ಕಾರಣಕ್ಕೆ ಜಯಶ್ರೀ ದೇವಿ ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದಾರೆ.
ಈ ಹಿಂದೆ ಸಾಕಷ್ಟು ಸಿನಿಮಾ ನಿರ್ಮಿಸಿ ಅನುಭವವಿರುವ,  ಜಯಶ್ರೀ ದೇವಿ ಕುರುಕ್ಷೇತ್ರದ ಪಿಲ್ಲರ್ ಆಗಿದ್ದಾರೆ, ಎಲ್ಲರ ಈ ಪ್ರಯತ್ನದ ಫಲವಾಗಿ ಕುರುಕ್ಷೇತ್ರ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಮಟ್ಟದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 
ದರ್ಶನ್ 'ಕುರುಕ್ಷೇತ್ರ'ದಲ್ಲಿ ದುರ್ಯೋಧನನ ಪತ್ನಿ ಭಾನುಮತಿಯಾಗಿ ರೆಮ್ಯಾ ನಂಬೀಸನ್: ದರ್ಶನ್ 'ಕುರುಕ್ಷೇತ್ರ'ದಲ್ಲಿ ದುರ್ಯೋಧನನ ಪತ್ನಿ ಭಾನುಮತಿಯಾಗಿ ರೆಮ್ಯಾ ನಂಬೀಸನ್: Reviewed by VIVEKARAMA on ಸೆಪ್ಟೆಂಬರ್ 18, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.