ಶುರುವಾಯಿತು ಚಿತ್ರಮಂದಿರದ ಮುಂದೆ 'ಡಿ ಬಾಸ್' ತಾರಕೋತ್ಸವ !

ದಸರ ಹಬ್ಬಕ್ಕೆ ಇನ್ನು ಮೂರೇ ಮೂರು ದಿನ ಬಾಕಿ ಇದೆ. ನೀವೆಲ್ಲ ಹಬ್ಬದ ತಯಾರಿಯನ್ನು ಇನ್ನೂ ಶುರು ಮಾಡಿರುತ್ತಿರೋ ಇಲ್ಲವೋ ಆದರೆ ದರ್ಶನ್ ಅಭಿಮಾನಿಗಳು ಮಾತ್ರ ಈಗಾಗಲೇ ಹಬ್ಬದ ತಯಾರಿಯಲ್ಲಿ ತೊಡಗಿದ್ದಾರೆ.

ಈ ವರ್ಷ ದರ್ಶನ್ ಅಭಿಮಾನಿಗಳು ದಸರ ಹಬ್ಬಕ್ಕಿಂತ 'ತಾರಕ್' ಚಿತ್ರದ ಸಂಭ್ರಮದಲ್ಲಿದ್ದಾರೆ. ಸಿನಿಮಾ ಇದೇ ಶುಕ್ರವಾರ ದಸರ ಹಬ್ಬದ ವಿಶೇಷವಾಗಿ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಅದ್ದೂರಿಯಾಗಿ ಸಿನಿಮಾವನ್ನು ಸ್ವಾಗತಿಸುವುದಕ್ಕೆ ಡಿ ಬಾಸ್ ಭಕ್ತರು ಸಜ್ಜಾಗಿದ್ದಾರೆ.


ಸಂತೋಷ್ ಚಿತ್ರಮಂದಿರ

 ಗಾಂಧಿನಗರದ ಸಂತೋಷ್ ಚಿತ್ರಮಂದಿರ 'ತಾರಕ್' ಚಿತ್ರದ ಮುಖ್ಯ ಚಿತ್ರಮಂದಿರವಾಗಿದೆ. ಈಗಾಗಲೇ ಈ ಚಿತ್ರಮಂದಿರ 'ತಾರಕ್' ಚಿತ್ರದ ಪೋಸ್ಟರ್ ಗಳಿಂದ ಸಿಂಗಾರಗೊಂಡಿದೆ.

ಸಿನಿಮಾದ ಬಗ್ಗೆ
'ತಾರಕ್' ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾವಾಗಿದೆ. ಮಿಲನ ಪ್ರಕಾಶ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ದರ್ಶನ್ ತಾತನ ಪಾತ್ರದಲ್ಲಿ ನಟ ದೇವರಾಜ್ ಕಾಣಿಸಿಕೊಂಡಿದ್ದಾರೆ. ಶಾನ್ವಿ ಶ್ರೀವತ್ಸವ ಹಾಗೂ ಶೃತಿ ಹರಿಹರನ್ ಚಿತ್ರದ ನಾಯಕಿಯರಾಗಿದ್ದಾರೆ.
ಶುರುವಾಯಿತು ಚಿತ್ರಮಂದಿರದ ಮುಂದೆ 'ಡಿ ಬಾಸ್' ತಾರಕೋತ್ಸವ ! ಶುರುವಾಯಿತು ಚಿತ್ರಮಂದಿರದ ಮುಂದೆ 'ಡಿ ಬಾಸ್' ತಾರಕೋತ್ಸವ ! Reviewed by VIVEKARAMA on ಸೆಪ್ಟೆಂಬರ್ 28, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.