ಜಗ್ಗೇಶ್ ನಟನೆಯ 8ಎಂಎಂ ನಲ್ಲಿ ಪೊಲೀಸ್ ಅಧಿಕಾರಿಯಾಗಿ ವಶಿಷ್ಟ ಸಿಂಹ


ಹರಿಕೃಷ್ಣ ನಿರ್ದೇಶನದ 8ಎಂಎಂ ಸಿನಿಮಾದಲ್ಲಿ ಜಗ್ಗೇಶ್ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ದು, ವಿಲ್ಲನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದ ವಶಿಷ್ಟ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.ಹಲವು ಸಿನಿಮಾಗಳಲ್ಲಿ ವಶಿಷ್ಟ ಸಿಂಹ ವಿಲ್ಲನ್ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ 8 ಎಂಎಂ ನಲ್ಲಿ ವಿಭಿನ್ನ ರೀತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಜಗ್ಗೇಶ್ ಎದುರು ನಟಿಸುತ್ತಿದ್ದಾರೆ.


ವಿಲ್ಲನ್ ಆಗಲಿ, ಅಥವಾ ನಾಯಕನ ಪಾತ್ರವಾಗಲಿ ಅದಕ್ಕೆ ನ್ಯಾಯ ಒದಗಿಸುವುದು ನನ್ನ ಕರ್ತವ್ಯ, ನನ್ನ ಸಾಮಾನ್ಯ ಪಾತ್ರಗಳಿಂದ ನಾನು ವಿಭಿನ್ನ ಕ್ಯಾರೆಕ್ಟರ್ ಗಳಲ್ಲಿ ಅಭಿನಯಿಸಲು ಮುಂದಾಗಿದ್ದು, 8 ಎಂಎಂ ಅದರ ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಹರಿಕೃಷ್ಣ ಈ ಮೊದಲು ವಶಿಷ್ಟ ಸಿಂಹ ಅವರ ಜೊತೆ ಕೆಲಸ ಮಾಡಿದ್ದು, ಈ ಪಾತ್ರಕ್ಕಾಗಿ ಹರಿಕೃಷ್ಣ ವಿಶಿಷ್ಟ ಅವರನ್ನು ಮನಸ್ಸಲ್ಲಿಟ್ಟುಕೊಂಡಿದ್ದರು. ಹಿರಿಯ ನಾಯಕ ಜಗ್ಗೇಶ್ ಅವರ ಎದುರು ನಾನು ನಟಿಸುತ್ತಿರುವುದು ನನಗೆ ಆಶ್ಚರ್ಯ ತಂದಿತ್ತು, ಆದರೆ ಸಿನಿಮಾ ಬಗ್ಗೆ ಹರಿಕೃಷ್ಣ ಪೂರ್ಣ ವಿವರ ನೀಡಿದ ನಂತರ ನಾನು ಚಿತ್ರಕ್ಕೆ ಸಹಿ ಮಾಡಿದೆ ಎಂದು ತಿಳಿಸಿದ್ದಾರೆ

ಸೆಪ್ಟಂಬರ್ 22 ರಂದು ಆಯೋಜಿಸಿದ್ದ ಅದ್ಧೂರಿ ಮಹೂರ್ಥ ಕಾರ್ಯಕ್ರಮದಲ್ಲಿ 
ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಯಿತು.ಸಿನಿಮಾದಲ್ಲಿ ಅತುಲ್ ಕುಲಕರ್ಣಿ ಕೂಡ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.


ಜಗ್ಗೇಶ್ ನಟನೆಯ 8ಎಂಎಂ ನಲ್ಲಿ ಪೊಲೀಸ್ ಅಧಿಕಾರಿಯಾಗಿ ವಶಿಷ್ಟ ಸಿಂಹ ಜಗ್ಗೇಶ್ ನಟನೆಯ 8ಎಂಎಂ ನಲ್ಲಿ ಪೊಲೀಸ್ ಅಧಿಕಾರಿಯಾಗಿ ವಶಿಷ್ಟ ಸಿಂಹ Reviewed by VIVEKARAMA on ಸೆಪ್ಟೆಂಬರ್ 25, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.